ಕರ್ನಾಟಕ

karnataka

ETV Bharat / state

ಪ್ರೀತಿಗೆ ಜಾತಿಯೇ ವಿಲನ್‌ : ಯುವ ಪ್ರೇಮಿಗಳು ಬಾವಿಗೆ ಹಾರಿ ಆತ್ಮಹತ್ಯೆ ಶಂಕೆ - ಬನಹಟ್ಟಿ ಪ್ರೇಮಿಗಳ ಆತ್ಮಹತ್ಯೆ

ಯುವಕ ಹಾಗೂ ಅಪ್ರಾಪ್ತೆ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಪ್ರೀತಿಗೆ ಜಾತಿ ಅಡ್ಡ ಬರುತ್ತದೆ ಎಂಬ ಕಾರಣದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ..

ಪ್ರೇಮಿಗಳು ಆತ್ಮಹತ್ಯೆ
ಪ್ರೇಮಿಗಳು ಆತ್ಮಹತ್ಯೆ

By

Published : Aug 9, 2020, 6:13 PM IST

Updated : Aug 10, 2020, 8:07 AM IST

ವಿಜಯಪುರ :ಜಿಲ್ಲೆಯ ಸಿಂದಗಿ ತಾಲೂಕಿನ ಬನಹಟ್ಟಿ ಗ್ರಾಮದ ಹೊರವಲಯದ ಬಾವಿಯಲ್ಲಿ ಯುವಕ ಹಾಗೂ ಅಪ್ರಾಪ್ತೆಯ ಶವ ಪತ್ತೆಯಾಗಿವೆ. ಪ್ರೀತಿಗೆ ಕುಟುಂಬಸ್ಥರು ಒಪ್ಪದ ಹಿನ್ನೆಲೆ ಇವರಿಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಶಿವಕುಮಾರ ಚೌಧರಿ (19) ಹಾಗೂ ಶಬಾನಾ ಮುಜಾವರ (16) ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಇಬ್ಪರೂ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ, ಪ್ರೀತಿಗೆ ಜಾತಿ ಅಡ್ಡ ಬರುತ್ತದೆ ಎಂಬ ಕಾರಣದಿಂದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸ್ ಠಾಣೆ ಪಿಎಸ್​ಐ ರವಿ ಯಡವಣ್ಣವರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ತನಿಖೆ ಬಳಿಕ ಹೆಚ್ಚಿನ ಮಾಹಿತಿ‌ ಲಭ್ಯವಾಗಲಿದೆ.

Last Updated : Aug 10, 2020, 8:07 AM IST

ABOUT THE AUTHOR

...view details