ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಕೊರೊನಾ ಪ್ರಕರಣಗಳ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಡಿಸಿ - vijayapura latest news

ಒಟ್ಟು 434 ಜನರನ್ನು ನಿಗಾದಲ್ಲಿ ಇಡಲಾಗಿದ್ದು, ಅದರಲ್ಲಿ 247 ಜನರು 28 ದಿನ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ. 15-28 ದಿನಗಳನ್ನು ಮುಗಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

Vijayapura Lockdown...DC gave details about corona case
ವಿಜಯಪುರ ಲಾಕ್​ಡೌನ್​: ಸಂಪೂರ್ಣ ಮಾಹಿತಿ ನೀಡಿದ ಜಿಲ್ಲಾಧಿಕಾರಿ

By

Published : Apr 10, 2020, 4:56 PM IST

ವಿಜಯಪುರ: ಜಿಲ್ಲೆಯಲ್ಲಿ ಒಟ್ಟು 434 ಜನರನ್ನು ನಿಗಾದಲ್ಲಿ ಇಡಲಾಗಿದ್ದು, ಅದರಲ್ಲಿ 247 ಜನರು 28 ದಿನದ ಹೋಮ್ ಕ್ವಾರಂಟೈನ್ ಮುಗಿಸಿದ್ದಾರೆ. 15-28 ದಿನಗಳನ್ನು ಮುಗಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 38 ಜನ ಕ್ವಾರಂಟೈನ್​ನಲ್ಲಿ ಇದ್ದಾರೆ. ಈಗಾಗಲೇ 75 ಜನರ ಸ್ಯಾಂಪಲ್​ಗಳನ್ನು ಟೆಸ್ಟ್​ಗೆ ಕಳುಹಿಸಲಾಗಿದೆ. ಇದರಲ್ಲಿ 63 ಮಂದಿಯ ವರದಿ ನೆಗೆಟಿವ್ ಬಂದಿವೆ. 12 ಜನರ ವರದಿ ಬರಬೇಕಿದೆ. ಇಂದು ಮತ್ತೆ 10-12 ಸ್ಯಾಂಪಲ್​​ಗಳನ್ನು ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

ವೈದ್ಯಕೀಯ ನೆಪ ಹೇಳಿ ಪಾಸ್​ಗೆ ಬರುವವರು ಇನ್ನು ಮುಂದೆ ಎಚ್ಚರ ವಹಿಸಬೇಕು. ಇಲ್ಲಿಂದ ಹೋದವರು ವಾಪಸ್ ಬರಲೇಬಾರದು. ಒಂದು ವೇಳೆ ಬಂದರೆ ಅವರ ಇಡೀ ಕುಟುಂಬವನ್ನು 14 ದಿನಗಳ ಕಾಲ ಹೋಮ್​ ಕ್ವಾರಂಟೈನ್ ಮಾಡಲಾಗುವುದು ಎಂದರು. ಸರ್ಕಾರಿ ಹಾಗೂ ಖಾಸಗಿ ನೌಕರರು ಕೆಲಸ ನಿರ್ವಹಿಸಲು ಪ್ರತಿದಿನ ಬೇರೆ-ಬೇರೆ ಜಿಲ್ಲೆಗೆ ಓಡಾಡುತ್ತಿದ್ದಾರೆ. ಅಂತಹವರಿಗೂ ಸಹಿತ ಇನ್ನು ಮುಂದೆ ಅನುಮತಿ ಕೊಡುವುದಿಲ್ಲ. ಅವರು ಅಲ್ಲಿಯೇ ಇರಬೇಕು, ಇಲ್ಲವಾದರೆ ರಜೆ ತೆಗೆದುಕೊಂಡು ಮನೆಯಲ್ಲಿರಬೇಕು. ಹೋಗಿ ಬಂದು ಕೆಲಸ ನಿರ್ವಹಿಸುವವರಿಗೆ ಇನ್ನು ಮುಂದೆ ಅನುಮತಿಯಿಲ್ಲ ಎಂದರು.

ಕೆಲ ಜನಪ್ರತಿನಿಧಿಗಳು ಸ್ಲಂ ನಿವಾಸಿಗಳಿಗೆ, ಸ್ಥಳೀಯರಿಗೆ ಮಿಸ್ ​ಗೈಡ್ ಮಾಡುತ್ತಿದ್ದಾರೆ. ಸಹಿ ಹಾಕಿ ಕೆಲ ರಾಜಕೀಯ ಮುಖಂಡರು ಅವರನ್ನು ಇಲ್ಲಿಗೆ ಕಳುಹಿಸುತ್ತಿದ್ದಾರೆ. ಅಂತಹವರ ಮೇಲೆಯೂ ಇನ್ನು ಮುಂದೆ ಕೇಸ್ ಹಾಕಲಾಗುವುದು ಎಂದರು. ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಎಲ್ಲವೂ ಅವರಿಗೆ ನೀಡಲಾಗುತ್ತಿದೆ. ಇಂತಹ ಸಮಯವನ್ನು ರಾಜಕೀಯ‌ ಉದ್ದೇಶಕ್ಕೆ ಬಳಸಿಕೊಳ್ಳುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ABOUT THE AUTHOR

...view details