ಕರ್ನಾಟಕ

karnataka

ETV Bharat / state

ವಿಜಯಪುರ: ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ, ಬಾಲಕ ಸಾವು - Vijayapura KSRTC bus collision

ಕಗ್ಗೂಡ ಕ್ರಾಸ್ ಬಳಿಯ ಲಿಂಬೆ ತೋಟದಿಂದ ಸೋಯಲ್ ಓಡಿ ಬರುವಾಗ ಬಸ್ ಡಿಕ್ಕಿಯಾಗಿದೆ. ತಲೆಗೆ ಬಲವಾಗಿ ಏಟು ಬಿದ್ದು ಪರಿಣಾಮ ಸೋಯಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.‌

ಬಾಲಕ ಸಾವು
ಬಾಲಕ ಸಾವು

By

Published : Mar 6, 2021, 4:04 PM IST

ವಿಜಯಪುರ: ಕೆಎಸ್​ಆರ್​ಟಿಸಿ ಬಸ್ ಡಿಕ್ಕಿಯಾಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ, ತಾಲೂಕಿನ ಕಗ್ಗೋಡ ಗ್ರಾಮದಲ್ಲಿ ನಡೆದಿದೆ.

ಕಗ್ಗೂಡ ಗ್ರಾಮದ ಸೋಯಲ್ ಬಾಬುದಾಬಿ ಜಾತಗಾರ (10) ಮೃತ ಬಾಲಕ. ಕಗ್ಗೂಡ ಕ್ರಾಸ್ ಬಳಿಯ ಲಿಂಬೆ ತೋಟದಿಂದ ಸೋಯಲ್ ಓಡಿ ಬರುವಾಗ ಬಸ್ ಡಿಕ್ಕಿಯಾಗಿದೆ. ತಲೆಗೆ ಬಲವಾಗಿ ಏಟು ಬಿದ್ದು ಪರಿಣಾಮ ಸೋಯಲ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.‌

ಮೃತ ಬಾಲಕನ ತಂದೆ ಬಾಬುದಾಬಿ ಇಟ್ಟಂಗಿ ಬಟ್ಟಿಯಲ್ಲಿ ಕೆಲಸ ಮಾಡುತ್ತಿದ್ದನು. ‌ಕೆಲಸಕ್ಕೆ ಬರುವಾಗ ತನ್ನ ಜೊತೆ ಮಗನನ್ನು ಕರೆದುಕೊಂಡು ಬಂದಿದ್ದಾನೆ. ಆತ ಕೆಲಸ ಮಾಡುವಾಗ ಬಾಲಕ ನಿಂಬೆ ತೋಟದಲ್ಲಿ ಆಡವಾಡುತ್ತಾ ರಸ್ತೆಗೆ ಬಂದಾಗ ಈ ದುರಂತ ಸಂಭವಿಸಿದೆ. ಚಾಲಕ ಬಸ್ ಬಿಟ್ಟು ಪರಾರಿಯಾಗಿದ್ದು, ಬಸ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details