ಕರ್ನಾಟಕ

karnataka

ETV Bharat / state

ಪತ್ರಕರ್ತರ ಹೆಸರಿನಲ್ಲಿ ಹಣ ಸುಲುಗೆ, ವ್ಯಾಪಾರಿ ಮೇಲೆ ಹಲ್ಲೆ - vijypura reporters case

ಪತ್ರಕರ್ತರೆಂದು ಹೇಳಿಕೊಂಡು ವ್ಯಕ್ತಿಯೊಬ್ಬರ ಬಳಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅದನ್ನು ನಿರಾಕರಸಿದಕ್ಕಾಗಿ ಕಬ್ಬಣದ ರಾಡ್​ನಿಂದ ಹಲ್ಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ..

vijaypura incident
ಪತ್ರಕರ್ತರ ಹೆಸರಿನಲ್ಲಿ ಹಣ ಸುಲುಗೆ, ವ್ಯಾಪಾರಿ ಮೇಲೆ ಹಲ್ಲೆ

By

Published : Jun 29, 2022, 2:54 PM IST

ವಿಜಯಪುರ :ಪತ್ರಕರ್ತರೆಂದು ಹೇಳಿಕೊಂಡು ಹಣಕ್ಕೆ ಬೇಡಿಕೆ ಇರಿಸಿದ್ದಲ್ಲದೇ ವ್ಯಾಪಾರಿಯೊಬ್ಬನ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ವಿಜಯಪುರದ ಕೆಐಎಡಿಬಿಯ ಬಾಲಾಜಿ ಮೆಟಲ್ ಇಂಡಸ್ಟ್ರೀಜ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಪತ್ರಕರ್ತರೆಂದು ವಿವಿಧ ಚಾನಲ್ ಮತ್ತು ಪತ್ರಿಕೆಯ ಹೆಸರು ಹೇಳಿಕೊಂಡು ಶುಭಮ್ ಬಾಳಾಸಾಹೇಬ ವಾಡೇಕರ್ ಎಂಬುವರಿಗೆ ಹಣಕ್ಕೆ ಬೇಡಿಕೆ ಇರಿಸಿದ್ದಾರೆ. ಹಣ ಕೊಡಲು ನಿರಾಕರಿಸಿದ ಶುಭಮ್​ಗೆ ರಾಡ್​ನಿಂದ ಹಲ್ಲೆ ನಡೆಸಿದ್ದಾರೆ. ಇದರಿಂದ ಗಾಯಗೊಂಡ ಶುಭಮ್​ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಿಜ್ವಾನ್‌ ಅಹ್ಮದ್ ಮುಲ್ಲಾ, ಕಲ್ಮೇಶ ಶ್ಯಾಪೇಟಿ, ರಿಯಾಜ್ ಜಹಗೀರದಾರ್ ಹಾಗೂ ಮೈಬೂಬ ಸಾರವಾನ್ ಎಂಬಾತ ಸೇರಿ ಮತ್ತಿತರರ ಮೇಲೆ ಎಪಿಎಂಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ:ಜೈಲು ವಾರ್ಡನ್​ ಮೇಲೆ ಗ್ಯಾಂಗ್​ಸ್ಟಾರ್​ಗಳಿಂದ ಹಲ್ಲೆ

ABOUT THE AUTHOR

...view details