ಕರ್ನಾಟಕ

karnataka

ETV Bharat / state

ರೋಗಿ ಬೆತ್ತಲಾಗಿ ಬಿದ್ದು ನರಳಾಡಿದ್ರೂ ಕಣ್ಣೆತ್ತಿ ನೋಡಲಿಲ್ವಾ ಜಿಲ್ಲಾಸ್ಪತ್ರೆ ವೈದ್ಯರು?! - ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡದ ವಿಜಯಪುರ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಸುದ್ದಿ

ವೈದ್ಯೋ ನಾರಾಯಣ ಹರಿ ಅಂದ್ರೆ ವೈದ್ಯರು ದೇವರಿಗೆ ಸಮಾನ ಅಂತಾರೆ. ಆದರೆ ವಿಜಯಪುರ ಜಿಲ್ಲಾ ಆಸ್ಪತ್ರೆಯ ವ್ಯದ್ಯರು ಚಿಕಿತ್ಸೆಗಾಗಿ ಬಂದ ರೋಗಿ ಬೆತ್ತಲೆಯಾಗಿ ಬಿದ್ದು ನರಳಾಡುತ್ತಿದ್ದರೂ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ವಿಜಯಪುರ ಜಿಲ್ಲಾ ಆಸ್ಪತ್ರೆ ಸ್ಥಿತಿ

By

Published : Nov 18, 2019, 11:14 AM IST

Updated : Nov 18, 2019, 11:56 AM IST

ವಿಜಯಪುರ: ರೋಗಿವೋರ್ವ ಸೂಕ್ತ ಚಿಕಿತ್ಸೆ ಸಿಗದೇ ಬೆತ್ತಲೆಯಾಗಿ ಬಿದ್ದು ನರಳಾಡಿದ ಹೃದಯ ವಿದ್ರಾವಕ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ವಿಡಿಯೋವೊಂದು ವೈರಲ್​ ಆಗಿದೆ.

ವೈದ್ಯೋ ನಾರಾಯಣ ಹರಿ ಅಂದ್ರೆ ವೈದ್ಯರು ದೇವರಿಗೆ ಸಮಾನ ಅಂತಾರೆ. ಆದ್ರೆ ಇಲ್ಲಿ ವೈದ್ಯರು ಚಿಕಿತ್ಸೆಗಾಗಿ ಬಂದ ರೋಗಿ ಬೆತ್ತಲೆಯಾಗಿ ಬಿದ್ದು ನರಳಾಡುತ್ತಿದ್ದರೂ ಸಹ ಇತ್ತ ಕಣ್ಣಾಯಿಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಬೆತ್ತಲಾಗಿ ಬಿದ್ದು ನರಳಾಡಿದ್ರೂ ರೋಗಿಯನ್ನು ಕಣ್ಣೇತ್ತಿ ನೋಡದ ವೈದ್ಯರು

ರವಿ ಪಾಟೀಲ್ ಎಂಬ ವ್ಯಕ್ತಿ ಅತಿಸಾರ ಬೇದಿ ಅಂತಾ ಚಿಕಿತ್ಸೆಗೆ ಬಂದರೆ ಸೂಕ್ತ ಚಿಕಿತ್ಸೆ ನೀಡುವುದಿರಲಿ ವೈದ್ಯರು ಅವನತ್ತ ತಲೆ ಎತ್ತಿಯೂ ಸಹ ನೋಡಿಲ್ಲವಂತೆ. ಅಷ್ಟೇ ಅಲ್ಲದೆ ಅದೇ ವಾರ್ಡ್ ನ ಮತ್ತೊಂದು ಬೆಡ್ ನಲ್ಲಿ ನಾಯಿಯೊಂದು ಆರಾಮವಾಗಿ ಮಲಗಿದ್ದು, ಇದನ್ನು ಸಿಬ್ಬಂದಿ ನೋಡಿ ನೋಡದಂತೆ ಸಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಜಿಲ್ಲಾಸ್ಪತ್ರೆ ಸಿಬ್ಬಂದಿಯ ಈ ವರ್ತನೆಯನ್ನು ಕಂಡು ಕರವೇ ಮುಖಂಡ ಕೃಷ್ಣಾ ಈ ದೃಶ್ಯವನ್ನು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಜಿಲ್ಲಾಸ್ಪತ್ರೆಗೆ ಆಗಮಿಸುವ ರೋಗಿಯ ಇಂಥ ಸ್ಥಿತಿಗೆ ಕಾರಣವಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Last Updated : Nov 18, 2019, 11:56 AM IST

For All Latest Updates

ABOUT THE AUTHOR

...view details