ವಿಜಯಪುರ:ವಸತಿ ಯೋಜನೆಯಡಿ ಜಿಪಿಎಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಜಯಪುರ ತೋಟಗಾರಿಕೆ ನಿರೀಕ್ಷಕ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಜಯಪುರ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ತೋಟಗಾರಿಕೆ ನಿರೀಕ್ಷಕ ಎಸಿಬಿ ಬಲೆಗೆ - Vijayapura Latest News
ವಸತಿ ಯೋಜನೆಯಡಿ ಜಿಪಿಎಸ್ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಿಜಯಪುರ ಮಹಾನಗರ ಪಾಲಿಕೆ ತೋಟಗಾರಿಕೆ ಪ್ರಭಾರ ನಿರೀಕ್ಷಕ ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ವಿಜಯಪುರ: ಲಂಚಕ್ಕೆ ಬೇಡಿಕೆ ಇಟ್ಟಿದ್ದ ತೋಟಗಾರಿಕೆ ನಿರೀಕ್ಷಕ ಎಸಿಬಿ ಬಲೆಗೆ
ವಿಜಯಪುರ ಮಹಾನಗರ ಪಾಲಿಕೆ ತೋಟಗಾರಿಕೆ ಪ್ರಭಾರ ನಿರೀಕ್ಷಕ ಶಾಂತಪ್ಪ ಪತ್ತಾರ ಎಸಿಬಿ ಬಲೆಗೆ ಬಿದ್ದಿರುವ ಅಧಿಕಾರಿಯಾಗಿದ್ದಾರೆ. ಶಾಂತಪ್ಪ ಪತ್ತಾರ, ವಾಜಪೇಯಿ ಆಶ್ರಯ ವಸತಿ ಯೋಜನೆಯಡಿ ಜಗದೇವಿ ಚಾವೂರ ಎಂಬುವವರಿಂದ 20 ಸಾವಿರ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದರು. ಈಗಾಗಲೇ 10 ಸಾವಿರ ಹಣ ಕೊಟ್ಟಿದ್ದ ಜಗದೇವಿ ಮನೆಗೆ ಮತ್ತೆ 10 ಸಾವಿರ ಹಣಕ್ಕಾಗಿ ಬಂದಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಎಸಿಬಿ ಡಿವೈಎಸ್ಪಿ ಮಂಜುನಾಥ ಗಗ್ಗಲ್ ನೇತೃತ್ವದಲ್ಲಿ ಸಿಪಿಐ ಹರಿಶ್ಚಂದ್ರ, ಪರಮೇಶ್ವರ ಕವಟಗಿ ತಂಡದಿಂದ ದಾಳಿ ನಡೆಸಲಾಗಿದೆ.