ಕರ್ನಾಟಕ

karnataka

ETV Bharat / state

ವಿಜಯಪುರ: ವಿದ್ಯುತ್ ತಂತಿಯಿಂದ ಬೆಂಕಿ.. ಬಣವೆ ಭಸ್ಮ - ಬಸವನಬಾಗೇವಾಡಿ ‌ಪೊಲೀಸ್ ಠಾಣೆ

ಬೂದಿಹಾಳ ಗ್ರಾಮದಲ್ಲಿ ನೂತನ ವಿದ್ಯುತ್ ಕಂಬ ಹಾಗೂ ತಂತಿ ಅಳವಡಿಕೆ ಮಾಡಲು‌ ಟೆಂಡರ್ ಕರೆದರೂ ಜನಪ್ರತಿನಿಧಿಗಳಿಂದ ಭೂಮಿಪೂಜೆ ನೆರವೇರದ ಕಾರಣ ತಂತಿ ಹೊಲದಲ್ಲಿಯೇ ಬಿದ್ದಿತ್ತು. ಇಂದು ಈ ವಿದ್ಯುತ್ ತಂತಿ ಮೂಲಕ ಬೆಂಕಿ ಹೊತ್ತಿಕೊಂಡಿದೆ.

vijayapura-hescom-ignores-fire-on-corn-stalk
ಹೆಸ್ಕಾಂ ನಿರ್ಲಕ್ಷ್ಯಕ್ಕೆ ಜೋಳದ ಬಣವೆಗೆ ಬೆಂಕಿ

By

Published : Mar 7, 2021, 7:07 PM IST

ವಿಜಯಪುರ:ಜೋಳದ ಬಣವೆಗೆ ಬೆಂಕಿ ತಗುಲಿದ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಸಂಭವಿಸಿದೆ.‌

ಓದಿ: ಸಿಡಿ ನಕಲಿ, ಹನಿಟ್ರ್ಯಾಪ್ ಯತ್ನ ನಡೆದಿದೆ, ಸಿಬಿಐ ತನಿಖೆಗೆ ವಹಿಸಿ : ಬಾಲಚಂದ್ರ ಜಾರಕಿಹೊಳಿ

ಬೂದಿಹಾಳ ಗ್ರಾಮದಲ್ಲಿ ನೂತನ ವಿದ್ಯುತ್ ಕಂಬ ಹಾಗೂ ತಂತಿ ಅಳವಡಿಸಲು ಟೆಂಡರ್ ಕರೆದರೂ ಜನಪ್ರತಿನಿಧಿಗಳಿಂದ ಭೂಮಿಪೂಜೆ ನೆರವೇರದ ಕಾರಣ ತಂತಿ ಹೊಲದಲ್ಲಿಯೇ ಬಿದ್ದಿತ್ತು. ಇಂದು ಈ ವಿದ್ಯುತ್ ತಂತಿ ಮೂಲಕ ಬೆಂಕಿ ಹೊತ್ತಿಕೊಂಡಿದೆ.

ಶಾಂತಾಬಾಯಿ ಈರಪ್ಪ ಕತಗಾರ ಎಂಬುವರ ಹೊಲದಲ್ಲಿದ್ದ ಒಂದು ಟ್ರ್ಯಾಕ್ಟರ್​ನಷ್ಟು ಜೋಳದ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ. ತಕ್ಷಣ ಹೊಲದ ಮಾಲೀಕರು ಹಾಗೂ ಸುತ್ತಮುತ್ತಲಿನ ಜನ ಆಗಮಿಸಿ ಬೆಂಕಿ ಬೇರೆಡೆ ಹರಡದಂತೆ ನೋಡಿಕೊಂಡಿದ್ದರಿಂದ ಹೊಲದಲ್ಲಿನ ಜೋಳದ ಬೆಳೆ ಹಾಗೂ ಗುಡಿಸಲು ಬೆಂಕಿಯಿಂದ ತಪ್ಪಿಸಿಕೊಂಡಿವೆ.

ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಅಗ್ನಿಶಾಮಕ ವಾಹನ ಹಾಗೂ ಲೈನ್‌ಮನ್ ಬಾರದ ಕಾರಣ, ಕಣಕಿ ಹಾಗೂ ಮರಗಳು ಸುಟ್ಟು ಕರಲಾಗಿವೆ. ಬಸವನಬಾಗೇವಾಡಿ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details