ಕರ್ನಾಟಕ

karnataka

ETV Bharat / state

ವಿಜಯಪುರ: ಗ್ರಾಮಸಮರದ ಅಖಾಡದಲ್ಲಿದ್ದಾರೆ 4,997 ಅಭ್ಯರ್ಥಿಗಳು - Vijayapura news

ವಿಜಯಪುರ ಗ್ರಾಮ ಪಂಚಾಯತಿಯ ಮೊದಲ ಹಂತದ ಚುನಾವಣೆಯಲ್ಲಿ ಮೊದಲ ಹಂತದಲ್ಲಿ 8 ತಾಲೂಕಿನ 111 ಗ್ರಾಮ ಪಂಚಾಯಿತಿಯ 2126 ಸದಸ್ಯ ಸ್ಥಾನಕ್ಕೆ ಡಿ. 22 ರಂದು ಮತದಾನ ನಡೆಯಲಿದೆ.

Vijayapura
ಪಿ. ಸುನೀಲಕುಮಾರ

By

Published : Dec 15, 2020, 3:05 PM IST

ವಿಜಯಪುರ:ಜಿಲ್ಲೆಯ ಗ್ರಾಮ ಪಂಚಾಯತಿಯ ಮೊದಲ ಹಂತದ ಚುನಾವಣೆಯಲ್ಲಿ ಕೊನೆಗೆ ಒಟ್ಟು 4,997 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಒಟ್ಟು ವಿವಿಧ ಕ್ಷೇತ್ರಗಳಿಂದ 7,533 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು.

ವಿವಿಧ ಕಾರಣಕ್ಕೆ 81 ನಾಮಪತ್ರಗಳು ತಿರಸ್ಕಾರಗೊಂಡಿದ್ದು, 7,232 ಪುರಸ್ಕರಿಸಲಾಗಿತ್ತು. ಇಂದು ಕೊನೆಗೆ 4,997 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಜಿಲ್ಲೆಯ12 ತಾಲೂಕಿನ 212 ಗ್ರಾಮ ಪಂಚಾಯಿತಿಗಳ ಪೈಕಿ 201 ಗ್ರಾಮ ಪಂಚಾಯಿತಿಗೆ ಚುನಾವಣಾ ಆಯೋಗ ಚುನಾವಣೆ ಘೋಷಣೆ ಮಾಡಿದೆ.

ಮೊದಲ ಹಂತದಲ್ಲಿ 8 ತಾಲೂಕಿನ 111 ಗ್ರಾಮ ಪಂಚಾಯಿತಿಯ 2126 ಸದಸ್ಯ ಸ್ಥಾನಕ್ಕೆ ಡಿ. 22 ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ತಿಳಿಸಿದ್ದಾರೆ. ಡಿ. 7ರಿಂದ 11ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಕೊನೆಗೆ 4997 ಅಭ್ಯರ್ಥಿಗಳು ವಿವಿಧ ಕ್ಷೇತ್ರಗಳಿಂದ ಕಣದಲ್ಲಿ ಇದ್ದಾರೆ.

ಓದಿ:ರಂಗೇರುತ್ತಿರುವ ಗ್ರಾ.ಪಂ. ಚುನಾವಣೆ: ಒಂದೇ ವಾರ್ಡ್​​ನಲ್ಲಿ ಕಣಕ್ಕಿಳಿದ ಪತಿ-ಪತ್ನಿ

ವಿಜಯಪುರ- 982, ತಿಕೋಟಾ 622, ನಿಡಗುಂದಿ 350, ಮುದ್ದೇಬಿಹಾಳ 738, ತಾಳಿಕೋಟೆಯ 661, ಬಬಲೇಶ್ವರ- 650, ಬಾಗೇವಾಡಿ 649, ಕೊಲ್ಹಾರ 345 ಸೇರಿ ಒಟ್ಟು 4997 ಕಣದಲ್ಲಿದ್ದಾರೆ.‌ ಡಿ. 22ರಂದು ಮತದಾನ ನಡೆಯಲಿದೆ.

ABOUT THE AUTHOR

...view details