ಕರ್ನಾಟಕ

karnataka

ETV Bharat / state

ವಿಜಯಪುರದ ರೆಡ್ ಜೋನ್ ಪ್ರದೇಶದಲ್ಲಿ ಡ್ರೋಣ್ ಕಣ್ಗಾವಲು: ಓಡಾಡಿದರೆ ಕೇಸ್​ ಪಕ್ಕಾ - ಸೀಲ್ ಡೌನ್ ಮಾಡಲಾದ ಶಿಫಾ ಆಸ್ಪತ್ರೆ

5 ದಿನಗಳ ಹಿಂದೆ ಸೀಲ್​​​​ಡೌನ್ ಮಾಡಲಾದ ಶಿಫಾ ಆಸ್ಪತ್ರೆ ಬಡಾವಣೆ ಹಾಗೂ ಕಿರಾಣಾ ಬಜಾರದಲ್ಲಿ ಪೊಲೀಸರು ಡ್ರೋಣ್ ಕ್ಯಾಮರಾ ಮೂಲಕ ಸಾರ್ವಜನಿಕರ ಚಲನವಲನಗಳನ್ನ ಗಮನಿಸುತ್ತಿದ್ದಾರೆ.

Vijayapura: Drone camera surveillance in Red Zone area
ವಿಜಯಪುರ: ರೆಡ್ ಜೋನ್ ಪ್ರದೇಶದಲ್ಲಿ ಡ್ರೋಣ್ ಕ್ಯಾಮರ ಕಣ್ಗಾವಲು..!

By

Published : May 2, 2020, 11:51 PM IST

ವಿಜಯಪುರ: 5 ದಿನಗಳ ಹಿಂದೆ ಸೀಲ್​​​​​​​ಡೌನ್ ಮಾಡಲಾದ ಶಿಫಾ ಆಸ್ಪತ್ರೆ ಬಡಾವಣೆ ಹಾಗೂ ಕಿರಾಣಾ ಬಜಾರದಲ್ಲಿ ಪೊಲೀಸರು ಡ್ರೋಣ್ ಕ್ಯಾಮರಾ ಮೂಲಕ ಸಾರ್ವಜನಿಕರ ಚಲನವಲನ ಗಮನಿಸುತ್ತಿದ್ದಾರೆ.

ನಗರದ ಐತಿಹಾಸಿಕ ಸ್ಮಾರಕ ಬಾರಾ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋಣ್ ಕ್ಯಾಮರಾದಿಂ‌ದ ಸೀಲ್​​ಡೌನ್ ಪ್ರದೇಶದಲ್ಲಿ ಸಾರ್ವಜನಿಕ ಓಡಾಟದ ಮೇಲೆ ನಿಗಾ ವಹಿಸಲಾಗಿದ್ದು, ಇಂದು ಕೂಡ ನಗರದಲ್ಲಿ ಇಬ್ಬರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈ ಹಿನ್ನೆಲೆಯಲ್ಲಿ ಸೀಲ್​​ಡೌನ್ ಏರಿಯಾದಲ್ಲಿ ಸಾರ್ವಜನಿಕರು ಮನೆಯಿಂದ ಹೊರ ಬಾರದಂತೆ ನಿಗಾ ವಹಿಸಲು ಡ್ರೋಣ್ ಕಾರ್ಯಾಚರಣೆ ನಡೆಸುತ್ತಿದೆ.

ರಸ್ತೆ ಮೇಲೆ ಜನರು ತಿರುಗಾಟ ನಡೆಸದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ರೆಡ್ ಜೋನ್ ಪ್ರದೇಶಕ್ಕೆಡ್ರೋಣ್ ಕ್ಯಾಮರಾ ಕಣ್ಗಾವಲಾಗಿದೆ.

ABOUT THE AUTHOR

...view details