ಕರ್ನಾಟಕ

karnataka

ETV Bharat / state

ವಿಜಯಪುರ: ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪ್ರಕಟ - Rajotsava Award

ವಿಜಯಪುರ ಜಿಲ್ಲಾಡಳಿತ ಈ ವರ್ಷದ “ಜಿಲ್ಲಾ ರಾಜೋತ್ಸವ ಪ್ರಶಸ್ತಿ” ಗೆ ಆಯ್ಕೆಯಾದ ಸಾಧಕರ ಪಟ್ಟಿಯನ್ನು ಪ್ರಕಟಿಸಿದೆ.

DC Sunil kumar
ಡಿಸಿ ಸುನೀಲ್​ ಕುಮಾರ್​

By

Published : Oct 31, 2020, 9:39 PM IST

ವಿಜಯಪುರ: ಪ್ರತಿ ವರ್ಷ ಕರ್ನಾಟಕ ರಾಜೋತ್ಸವದ ಪ್ರಯುಕ್ತ ನೀಡಲಾಗುವ “ಜಿಲ್ಲಾ ರಾಜೋತ್ಸವ ಪ್ರಶಸ್ತಿ” ಗೆ ಆಯ್ಕೆಯಾದ ಸಾಧಕರ ಪಟ್ಟಿಯನ್ನು ಜಿಲ್ಲಾಡಳಿತದಿಂದ ಪ್ರಕಟಿಸಲಾಗಿದೆ.

ತಿಕೋಟಾದ ಸೋಮಶೇಖರ ಜತ್ತಿ, ವಿಜಯಪುರದ ಡಾ.ಸುಜಾತಾ ಚಲವಾದಿ, ಸಿದ್ಧಲಿಂಗ ಚೌಧರಿ ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಗಣನೀಯ ಸೇವೆ ಪರಿಗಣಿಸಿ ಪ್ರಶಸ್ತಿ ಘೋಷಿಸಲಾಗಿದೆ. ವಿಜಯಪುರದ ಮಲ್ಲಿಕಾರ್ಜುನ ಭೃಂಗಿಮಠ, ಮುದ್ದೇಬಿಹಾಳದ ಸಂಗಮೇಶ ಶಿವಣಗಿ ಅವರಿಗೆ ಸಂಗೀತ ಕ್ಷೇತ್ರದಲ್ಲಿ, ಬ.ಬಾಗೇವಾಡಿಯ ಕು.ಶ್ರೀದೇವಿ ರೂಡಗಿ ನೃತ್ಯ, ಸಾರವಾಡದ ಸುಮಿತ್ರಾ ಮಾದರ ಜಾನಪದ (ಚೌಡಕಿ), ಇಂಡಿ ತಾಲೂಕಿನ ತಾಂಬಾದ ವೀರಭದ್ರೇಶ್ವರ ಭಜನಾ ಕಲಾ ತಂಡ (ರಿ)ಕ್ಕೆ ಜಾನಪದ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪ್ರಕಟ

ಬಸವನ ಬಾಗೇವಾಡಿ ತಾಲೂಕಿನ ನಾಗೂರದ ಬೀಲು ಲಮಾಣಿ ಬಯಲಾಟ, ವಿಜಯಪುರದ ಶ್ರೀಶೈಲ ಮಾಯಾಚಾರಿ ಶಿಲ್ಪಕಲೆ (ಲೋಹ), ವಿಜಯಪುರದ ಮೊಹ್ಮದ್ ಇಲಿಯಾಸ್ ಡಾಂಗೆ ಅವರಿಗೆ ಚಿತ್ರಕಲೆ, ಸುಗುಂಡಿಯ ರಮೇಶ ಶೇಬಾಣಿ ಕೃಷಿ/ತೋಟಗಾರಿಕೆ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ನೀಡಲಾಗಿದೆ.

ಮುದ್ದೇಬಿಹಾಳದ ದವಲತ್ರಾಯ ವಡವಡಗಿ, ವಿಜಯಪುರದ ಪುರುಷೋತ್ತಮ ಕುಲಕರ್ಣಿ, ರಾಹುಲ್ ಮಾನಕರ ಅವರನ್ನು ಪತ್ರಿಕೋದ್ಯಮ, ಇನ್ನು ವಿಜಯಪುರದ ಸೋಮಶೇಖರ ಕಲ್ಲೂರ ಕ್ರೀಡಾ, ಬಾಳಪ್ಪ ನಾಡಗೇರಿ ಸಂಕೀರ್ಣ ಹಾಗೂ ಎಸ್.ಟಿ ಮೇರವಾಡಿ ಅವರಿಗೆ ಶಿಕ್ಷಣ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ, ಸಿಂದಗಿ ತಾಲೂಕಿನ ತಿಳಗೊಳದ ಭೀಮರಾಯ ತಿಳಗೊಳ ಅವರ ರಂಗಭೂಮಿ ಕ್ಷೇತ್ರದ ಸಾಧನೆ ಸಿಂದಗಿ ತಾಲೂಕಿನ ನೆಲೆ ಪ್ರಕಾಶನ ಸಂಸ್ಥೆಯ ಸಂಕೀರ್ಣ ಕ್ಷೇತ್ರದ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದು ಜಿಲ್ಲಾ ರಾಜೋತ್ಸವ ಪ್ರಶಸ್ತಿ ಆಯ್ಕೆ ಸಮಿತಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details