ಕರ್ನಾಟಕ

karnataka

ETV Bharat / state

ವಿಜಯಪುರ ಜಿಲ್ಲಾ ಪೊಲೀಸರ ಭರ್ಜರಿ ಬೇಟೆ: ಚಿನ್ನಾಭರಣ ಸೇರಿ ಮಾದಕ ವಸ್ತುಗಳು ವಶಕ್ಕೆ - Vijayapura crime news

ಜಿಲ್ಲೆಯಲ್ಲಿ ಅಕ್ರಮವಾಗಿ ಮಾವಾ, ಗಾಂಜಾ, ಸರಾಯಿ ಮಾರಾಟ ಮಾಡಲಾಗುತ್ತಿದೆ ಎಂದು ಜಿಲ್ಲೆಯ ಶಾಸಕರೊಬ್ಬರು ಮಾಡಿದ ಆರೋಪ ಹಿನ್ನೆಲೆ ದಾಳಿ ನಡೆಸಿದ ಇಲ್ಲಿನ ಪೊಲೀಸರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಮಾವಾ ಪ್ಯಾಕೇಟ್, ಸರಾಯಿ, ನಗದು ವಶಪಡಿಸಿಕೊಂಡಿದ್ದಾರೆ.

Vijayapura district police raid on illegal activity
ಆರೋಪಿಗಳಿಂದ ವಶಪಡಿಸಿಕೊಂಡ ಗಾಂಜಾ ಹಾಗೂ ಮಾವಾ ಪ್ಯಾಕೇಟ್

By

Published : Sep 14, 2020, 4:31 PM IST

ವಿಜಯಪುರ:ಜಿಲ್ಲೆಯಲ್ಲಿ ನಿಷೇಧಿತ ಮಾವಾ, ಗಾಂಜಾ, ಅಕ್ರಮ ಸರಾಯಿ ಸೇರಿದಂತೆ ವಿವಿಧೆಡೆ ನಡೆದ ಮನೆಗಳ್ಳತನ ಪ್ರಕರಣವನ್ನು ಭೇದಿಸಿದ ಇಲ್ಲಿನ ಪೊಲೀಸರು ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ಮಾವಾ ಪ್ಯಾಕೇಟ್, ಸರಾಯಿ, ನಗದು ವಶಪಡಿಸಿಕೊಂಡಿದ್ದಾರೆ. ಸುದ್ದಿ ತಿಳಿದು ಬರುತ್ತಿದ್ದಂತೆ ಪೊಲೀಸರು ಒಂದೇ ವಾರದಲ್ಲಿ ದಾಳಿ ಮಾಡಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಕ್ಕೆ ಎಸ್​ಪಿ ಅನುಪಮ್ ಅಗರವಾಲ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ಗಾಂಜಾ ಹಾಗೂ ಮಾವಾ ಪ್ಯಾಕೇಟ್

ಕೇವಲ ಒಂದು ವಾರದಲ್ಲಿ ವಿವಿಧ ಪ್ರಕರಣ ಭೇದಿಸಿ ಒಟ್ಟು 162 ಆರೋಪಿಗಳನ್ನು ಬಂಧಿಸಿ ಅವರಿಂದ ಸುಮಾರು 22,95,643 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಅಕ್ರಮವಾಗಿ ಮಾವಾ ಮಾರಾಟ ಮಾಡಲಾಗುತ್ತಿದೆ ಎಂದು ಜಿಲ್ಲೆಯ ಶಾಸಕರೊಬ್ಬರು ಮಾಡಿದ ಆರೋಪ ಹಿನ್ನೆಲೆ ದೇವರಹಿಪ್ಪರಗಿ ಹಾಗೂ ಗಾಂಧಿಚೌಕ ಠಾಣಾ ವ್ಯಾಪ್ತಿಯ ಪಾನ್​ಶಾಪ್​ಗಳ ಮೇಲೆ ದಾಳಿ ನಡೆಸಿದ ಪೊಲೀಸರು ಐವರನ್ನು ಬಂಧಿಸಿ 756 ಮಾವಾ ಪ್ಯಾಕೇಟ್ ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 59 ಸಾವಿರ ರೂ. ಆಗಿದೆ.

ಆರೋಪಿಗಳಿಂದ ವಶಪಡಿಸಿಕೊಂಡ ಗಾಂಜಾ ಹಾಗೂ ಮಾವಾ ಪ್ಯಾಕೇಟ್

ಇದರ ಜತೆ ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ 570 ಕಡೆಗಳಲ್ಲಿ ದಾಳಿ ನಡೆಸಿ 104 ಜನರನ್ನು ಬಂಧಿಸಿ ಅವರಿಂದ 267.97 ಲೀ. ಅಕ್ರಮ ಸರಾಯಿ ವಶಪಡಿಸಿಕೊಂಡಿದ್ದಾರೆ. ದಾಬಾ, ರೆಸ್ಟೋರೆಂಟ್, ವಿವಿಧ ಗ್ರಾಮಗಳ ಮೇಲೆ ದಾಳಿ ನಡೆಸಿ ಅವರ ವಿರುದ್ಧ 102 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ಗಾಂಜಾ ಹಾಗೂ ಮಾವಾ ಪ್ಯಾಕೇಟ್

ಕಳೆದೊಂದು ವಾರದಿಂದ ಗಾಂಜಾ ಬೆಳೆಗಾರರ ಮೇಲೆ ದಾಳಿ‌ ನಡೆಸಿರುವ ಪೊಲೀಸರು 7 ಜನ ಆರೋಪಿಗಳನ್ನು ಬಂಧಿಸಿ ಅವರಿಂದ 138.92. ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಜಿಲ್ಲೆಯ ವಿವಿಧೆಡೆ ಜೂಜು ಅಡ್ಡೆಗಳ ಮೇಲೆ ದಾಳಿ ನಡೆಸಿ 32 ಜನರನ್ನು ಬಂಧಿಸಿ 36,480 ರೂ. ನಗದು ವಶಪಡಿಸಿಕೊಂಡಿದ್ದಾರೆ. ಮನೆಗಳ್ಳತನ ಮಾಡುತ್ತಿದ್ದ ಪ್ರತ್ಯೇಕ ಪ್ರಕರಣದಲ್ಲಿ ಓರ್ವ ಅಪ್ರಾಪ್ತ ಸೇರಿ 4 ಜನರನ್ನು ಬಂಧಿಸಿದ್ದಾರೆ. ಅವರಿಂದ 22.643 ಲಕ್ಷ ರೂ. ನಗದು, ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಅತಿ ಹೆಚ್ಚು ಪ್ರಕರಣ ಭೇದಿಸಿದ ಗೋಲಗುಮ್ಮಟ ಪೊಲೀಸ್ ತಂಡಕ್ಕೆ ಎಸ್​ಪಿ ಅನುಪಮ್ ಅಗರವಾಲ್ ಬಹುಮಾನ ಘೋಷಿಸಿದ್ದಾರೆ.

ಪೊಲೀಸರ ಕಾರ್ಯಾಚರಣೆ ಕುರಿತು ಎಸ್​ಪಿ ಅನುಪಮ್ ಅಗರವಾಲ್ ಮಾಹಿತಿ

ABOUT THE AUTHOR

...view details