ವಿಜಯಪುರ :ಸರ್ಕಾರಿ ಆಸ್ಪತ್ರೆ ಚಿಕಿತ್ಸೆ ಎಂದರೆ ಮೂಗುಮುರಿಯುವವರೇ ಹೆಚ್ಚು. ಅದೇ ಸರ್ಕಾರಿ ಆಸ್ಪತ್ರೆ ಇಂದು ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯಿಲ್ಲ ಎಂಬಂತೆ ಅಭಿವೃದ್ಧಿ ಪಥದಲ್ಲಿ ನಿಂತು, ಸತತ 3ನೇ ಬಾರಿಯೂ ರಾಜ್ಯದ ಜನರೇ ಕೊಂಡಾಡುವಂತಾಗಿದೆ.
ಹೌದು ಬಡ ಜನರಿಗೆ ಅಷ್ಟೇ ಸರ್ಕಾರಿ ಆಸ್ಪತ್ರೆಗಳು ಅನ್ನುತ್ತಿದ್ದ ಸಾರ್ವಜನಿಕರಿಗೆ ವಿಜಯಪುರ ಜಿಲ್ಲಾಸ್ಪತ್ರೆ ಮಾದರಿಯಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡುವ ಕಾಯಕಲ್ಪ ಪ್ರಶಸ್ತಿ ತನ್ನ ಮುಡಿಗೇರಿಸಿಕೊಂಡಿದೆ. ಸ್ವಚ್ಚತಾ ಕ್ರಮಕ್ಕೆ ಹೆಸರುವಾಸಿಯಾದ ಜಿಲ್ಲಾಸ್ಪತ್ರೆಗೆ, ನಿತ್ಯ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ಬರ್ತಾರೆ. ಚಿಕಿತ್ಸೆ ಕ್ರಮ, ತ್ಯಾಜ್ಯ ವಿಲೇವಾರಿ, ಸರ್ಕಾರಿ ನಿರ್ದೇಶನಗಳ ಅನುಷ್ಠಾನ ಸೇರಿದಂತೆ ಹಲವು ಕ್ರಮಗಳಿಗೆ ಜಿಲ್ಲಾಸ್ಪತ್ರೆ ಸೈ ಎನಿಸಿಕೊಂಡಿದ್ದು, ನಾಲ್ಕನೇ ಬಾರಿಗೆ ಕಾಯಕಲ್ಪ ಪ್ರಶಸ್ತಿ ಪಡೆದುಕೊಂಡಿದೆ. ಇನ್ನು ಜಿಲ್ಲೆಯ ಜನರ ಸಹಕಾರ ಹಾಗೂ ಆಸ್ಪತ್ರೆ ಸಿಬ್ಬಂದಿಗಳ ಶ್ರಮ ಜಿಲ್ಲಾಸ್ಪತ್ರೆ ಈ ರಾಜ್ಯಕ್ಕೆ ಮಾದರಿಯಾಗಿದೆ.
ಇನ್ನು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನೀಡುವ ಈ ಪ್ರಶಸ್ತಿ ಬಂದಿರೋದು ಇದೇ ಮೊದಲಲ್ಲ, ಕಳೆದ 2015-16 ಪ್ರಥಮ, 2016-17 ಪ್ರಥಮ ಸ್ಥಾನ, ಹಾಗೂ 2018-19 ರಲ್ಲಿ 3 ಸ್ಥಾನಕ್ಕೆ ಕಾಯಕಲ್ಪ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಅಲ್ಲದೇ ರಾಷ್ಟ್ರೀಯ ಗುಣಮಟ್ಟ ಭರವಸೆಯ ಸೇವಾ (NQAS) ಪ್ರಶಸ್ತಿ ಕೂಡ 2017-18 ರಲ್ಲಿ ವಿಜಯಪುರ ಜಿಲ್ಲಾಸ್ಪತ್ರೆ ಪಡೆದುಕೊಂಡಿತು. ಮತ್ತೆ ಈ ಸಾಲಿನಲ್ಲಿ ರಾಜ್ಯಕ್ಕೆ 2ನೇ ಸ್ಥಾನದ ಕಾಯಕಲ್ಪ ಅವಾರ್ಡ್ ಜಿಲ್ಲಾಸ್ಪತ್ರೆಗೆ ಬಂದಿರೋದು ಆಸ್ಪತ್ರೆ ವೈದ್ಯರ ಸಂತಸ ಇಮ್ಮಡಿಗೊಳಿಸಿದೆ.