ವಿಜಯಪುರ:ಕೊರೊನಾ ಮಹಾಮಾರಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡದಂತೆ ಮುನ್ನಚ್ಚರಿಕೆ ಕ್ರಮವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದನ್ನು ಜಿಲ್ಲಾಡಳಿತ ಕಡ್ಡಾಯಗೊಳಿಸಿದೆ. ನಿಯಮ ಉಲ್ಲಂಘಿಸಿದವರಿಗೆ ಹಾಕಿದ ದಂಡದ ಮೊತ್ತ ಕೇವಲ 7 ದಿನದಲ್ಲಿ ಒಂದು ಲಕ್ಷ ರೂ. ಮೀರಿದೆ.
ಮಾಸ್ಕ್ ಹಾಕದವರಿಗೆ ದಂಡ ವಿಧಿಸಿದ ವಿಜಯಪುರ ಜಿಲ್ಲಾಡಳಿತ: ವಾರದಲ್ಲಿ ಸಂಗ್ರಹವಾದ ಹಣ ಇಷ್ಟು! - ವಿಜಯಪುರ ಕೊರೊನಾ ದಂಡ ವಸೂಲಿ
ವಿಜಯಪುರ ಜಿಲ್ಲಾಡಳಿತ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡುವುದನ್ನು ಕಡ್ಡಾಯಗೊಳಿಸಿದೆ. ಆದರೆ ನಿಯಮ ಉಲ್ಲಂಘಿಸಿದವರಿಗೆ ಹಾಕಿದ ದಂಡದ ಮೊತ್ತ ಕೇವಲ 7 ದಿನದಲ್ಲಿ ಒಂದು ಲಕ್ಷ ರೂ. ಮೀರಿದೆ.
ಮಾಸ್ಕ್ ಹಾಕದೆ ರಸ್ತೆ, ಕಚೇರಿ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ಸಿಕ್ಕಿಹಾಕಿಕೊಂಡಿರುವವರ ಮೇಲೆ ದಂಡ ಪ್ರಯೋಗ ಆರಂಭಿಸಿ ವಾರದೊಳಗೆ 1,43,700 ರೂ. ದಂಡ ವಸೂಲಿ ಮಾಡಿದ್ದು, ಮಾ. 18ರಿಂದ 24ರವರೆಗೆ ಒಟ್ಟು 1047 ಪ್ರಕರಣ ದಾಖಲಿಸಲಾಗಿದೆ.
ಇಂಡಿ ತಾಲೂಕಿನಲ್ಲಿ 382 ಪ್ರಕರಣ ದಾಖಲಿಸಿ 38,200 ಸಾವಿರ ರೂ., ಕೊಲ್ಹಾರದಲ್ಲಿ 2 ಪ್ರಕರಣದಲ್ಲಿ 200 ರೂ., ಚಡಚಣದಲ್ಲಿ 17 ಪ್ರಕರಣ 1700 ರೂ., ದೇವರ ಹಿಪ್ಪರಗಿಯಲ್ಲಿ 14 ಪ್ರಕರಣ 1400 ರೂ., ನಿಡಗುಂದಿಯಲ್ಲಿ 39 ಪ್ರಕರಣ 3900 ರೂ., ಬಸವನ ಬಾಗೇವಾಡಿಯಲ್ಲಿ 187 ಪ್ರಕರಣ 18700 ರೂ., ಮುದ್ದೇಬಿಹಾಳದಲ್ಲಿ 25 ಪ್ರಕರಣ 2500 ರೂ., ವಿಜಯಪುರದಲ್ಲಿ 359 ಪ್ರಕರಣ 74,900 ರೂ. ಹಾಗೂ ಸಿಂದಗಿ ತಾಲೂಕಿನಲ್ಲಿ 22 ಪ್ರಕರಣ ದಾಖಲಿಸಿ 2200 ರೂ. ಸೇರಿ ಒಟ್ಟು 1047 ಪ್ರಕರಣ ದಾಖಲಿಸಿ 1,43,700 ರೂ. ವಸೂಲಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ತಿಳಿಸಿದ್ದಾರೆ.