ವಿಜಯಪುರ:ರೈತರು ಸರಳವಾಗಿ ವ್ಯವಹರಿಸಲು ಹಾಗೂ ಸಮಯ ಉಳಿಸಲು ವಿಜಯಪುರ ಡಿಸಿಸಿ ಬ್ಯಾಂಕ್ನಿಂದ 37 ಶಾಖೆಗಳಲ್ಲಿ ಮೈಕ್ರೋ ಎಟಿಎಂ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದರು.
ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯ 1,56,680 ರೈತರಿಗೆ ಕ್ರೆಡಿಟ್ ಕಾರ್ಡ್ ವಿತರಿಸಲಾಗುತ್ತಿದೆ. ಜೊತೆಗೆ 5 ಲೀಪ್‌ನ ಚೆಕ್ ಬುಕ್ ಕೊಡಲಾಗುತ್ತಿದ್ದು, ರೈತರ ಅಲ್ಪಾವಧಿ ಬೆಳೆ ಸಾಲವನ್ನು ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ. ಅಲ್ಲದೇ ಕ್ರೆಡಿಟ್ ಕಾರ್ಡ್ ಪಡೆದ ರೈತರಿಗೆ ಪಿನ್ ಕೋಡ್ ನೀಡಲಾಗುವುದು ಎಂದರು. ಬೆಳೆ ಸಾಲದ ಹಣ ಪಡೆಯಲು ದಿನವಿಡೀ ಸಮಯ ಕಳೆಯಬೇಕಾಗಿದ್ದ ರೈತರು ಈಗ ಮೈಕ್ರೋ ಎಟಿಎಂ ಬಳಸಿ ಬೆಳ ಸಾಲವನ್ನು ನೇರವಾಗಿ ಪಡೆಯಲು ಸಹಾಯಕವಾಗಿದೆ. ಹಾಗೂ ಈ ವ್ಯವಸ್ಥೆಯನ್ನು ಜಾರಿಗೆ ತಂದ ಕೀರ್ತಿ ವಿಜಯಪುರ ಡಿಸಿಸಿ ಬ್ಯಾಂಕ್ಗೆ ಸಲ್ಲುತ್ತದೆ ಎಂದು ಶಿವಾನಂದ ಪಾಟೀಲ ಹೇಳಿದರು.