ವಿಜಯಪುರ: ಜನ ಸಂಚಾರದ ಮೇಲೆ ನಿಗಾ ವಹಿಸಲು ಜಿಲ್ಲೆಯ ಗಡಿ ಭಾಗದಲ್ಲಿ ನಿರ್ಮಿಸಲಾದ ಧೂಳಖೇಡ ಚೆಕ್ಪೋಸ್ಟ್ ಗೆ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ ಭೇಟಿ ನೀಡಿ ಕಾರ್ಯ ವೈಖರಿ ಪರಿಶೀಲಿಸಿದ್ರು.
ವಿಜಯಪುರ: ಧೂಳಖೇಡ ಚೆಕ್ಪೋಸ್ಟ್ಗೆ ಡಿಸಿ ಭೇಟಿ, ಪರಿಶೀಲನೆ - Corona Effect
ವಿಜಯಪುರ ಜಿಲ್ಲೆಯಿಂದ ನಿರ್ಗಮಿಸುವ ಹಾಗೂ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆ ನಡೆಸಲು ಹಾಗೂ ಮಾಹಿತಿ ಸಂಗ್ರಹಿಸಲು ಜಿಲ್ಲೆಯ ಧೂಳಖೇಡ ಹಾಗೂ ನಿಡಗುಂದಿ ಗ್ರಾಮಗಳಲ್ಲಿ ಎರಡು ಚೆಕ್ಪೋಸ್ಟ್ ಗಳನ್ನು ನಿರ್ಮಿಸಿ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.
ಜಿಲ್ಲೆಯಿಂದ ನಿರ್ಗಮಿಸುವ ಹಾಗೂ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆ ನಡೆಸಲು ಹಾಗೂ ಮಾಹಿತಿ ಸಂಗ್ರಹಿಸಲು ಜಿಲ್ಲೆಯ ಧೂಳಖೇಡ ಹಾಗೂ ನಿಡಗುಂದಿ ಗ್ರಾಮಗಳಲ್ಲಿ ಎರಡು ಚೆಕ್ಪೋಸ್ಟ್ಗಳನ್ನು ನಿರ್ಮಿಸಿ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ. ಇನ್ನು ಏಕಮುಖ ಸಂಚಾರದ ಮೂಲಕ ಹೆದ್ದಾರಿಯಲ್ಲಿ ಹೋಗುವ ವಾಹನಗಳ ಮಾಹಿತಿ ಹಾಗೂ ಇ - ಪಾಸ್ ತಪಾಸಣೆ ನಡೆಸಲಾಗುತ್ತಿದೆ.
ಅಷ್ಟೇ ಅಲ್ಲದೇ, ಜಿಲ್ಲಾಡಳಿತವು ಜಿಲ್ಲೆಗೆ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಚೆಕ್ಪೋಸ್ಟ್ ಗಳಲ್ಲೇ ನಡೆಸಿ ಪ್ರಯಾಣಿಕರ ಕೈಗೆ ಸೀಲ್ ಒತ್ತಿ ಕ್ವಾರಂಟೈನ್ ಮಾಡುವ ವ್ಯವಸ್ಥೆ ಮಾಡಿದೆ. ಈ ಸಂಬಂಧ ವಿವಿಧ ಇಲಾಖೆಯ 50ಕ್ಕೂ ಅಧಿಕ ಸಿಬ್ಬಂದಿ ಚೆಕ್ಪೋಸ್ಟ್ಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.