ಕರ್ನಾಟಕ

karnataka

ಮೀಸಲು ನಿಗದಿಯಲ್ಲಿ ತಪ್ಪಾಗಿದ್ದರೆ ಮರು ಚುನಾವಣೆಗೆ ಕ್ರಮ: ಡಿಸಿ

By

Published : Jan 22, 2021, 5:11 PM IST

ಮೀಸಲಾತಿ ಪುನಾರಾವರ್ತನೆಯಾಗಿದೆ ಎಂದು ಸಭೆಯ ಬಳಿಕ ತಾಲೂಕಿನ ತಂಗಡಗಿ, ಕೋಳೂರು, ಢವಳಗಿ, ಬಿದರಕುಂದಿ ಗ್ರಾಪಂಗಳ ಕೆಲ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಆಕ್ಷೇಪ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಆಯೋಗದ ನಿರ್ದೇಶನದಂತೆ ಸಾಧ್ಯವಾದಷ್ಟು ಮಟ್ಟಿಗೆ ಮೀಸಲಾತಿ ಪುನಾರಾವರ್ತನೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದಿದ್ದಾರೆ.

vijayapura dc sunil kumar talk
ಡಿಸಿ ಸುನೀಲ್​​​ಕುಮಾರ

ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಪಂನ ಎರಡು ಸ್ಥಾನಗಳ ಮೀಸಲಾತಿ ಹಾಗೂ ವಾರ್ಡ್​ಗಳ ಅದಲು-ಬದಲು ಕುರಿತಂತೆ ದೂರುದಾರರ ಜೊತೆಗೆ ಉಪ ವಿಭಾಗಾಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಡಿಸಿ ಸುನೀಲ್ ​​​ಕುಮಾರ ಹೇಳಿದರು.

ಡಿಸಿ ಸುನೀಲ್​​​ ಕುಮಾರ

ಓದಿ: ನಾಲ್ವರು ಅಸಮಾಧಾನಿತ ಸಚಿವರಿಗೆ ಖಾತೆಗಳ ಮರು ಹಂಚಿಕೆ: ರಾಜ್ಯಪಾಲರ ಅಂಕಿತ

ಪತಿಯಂದಿರೂ ಹಾಜರ್:

ಗ್ರಾಪಂ ಮೀಸಲು ನಿಗದಿ ಸಭೆಗೆ ಗ್ರಾಪಂ ಸದಸ್ಯರಷ್ಟೇ ಹಾಜರಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಕೆಲವು ಪಂಚಾಯಿತಿಗಳ ಮಹಿಳಾ ಸದಸ್ಯರ ಪತಿಯಂದಿರು ಸಭೆಯಲ್ಲಿ ಪಾಲ್ಗೊಂಡಿದ್ದು ಕಂಡು ಬಂದಿತು. ಒಂದು ಹಂತದಲ್ಲಿ ಜಿಲ್ಲಾಧಿಕಾರಿಗಳೇ ಗ್ರಾಪಂ ಸದಸ್ಯರನ್ನು ಹೊರತುಪಡಿಸಿ ಬೇರೆ ಯಾರೂ ಇರಬಾರದು ಎಂದು ಹೇಳಿದರಲ್ಲದೇ, ಪಿಡಿಒಗಳ ಮೂಲಕ ಗ್ರಾಪಂ ಸದಸ್ಯರನ್ನು ಗುರುತಿಸಿ ಸದಸ್ಯರಲ್ಲದವರನ್ನು ಹೊರ ಕಳುಹಿಸುವಂತೆ ತಿಳಿಸಿದರು.

ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ದೂರುದಾರರ ಬಳಿಯೇ ಮತದಾರರ ಪಟ್ಟಿ ಯಾವುದು ತೆಗೆದುಕೊಂಡಿದ್ದಾರೆ ಎಂಬ ಸಂಶಯ ಇದೆ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಅಲ್ಲಿ ಒಂದು ವೇಳೆ ತಪ್ಪಾಗಿದ್ದರೆ ಮರು ಚುನಾವಣೆ ನಡೆಸುವ ಬಗ್ಗೆ ಆಯೋಗದಿಂದ ಸೂಚನೆ ಪಡೆದುಕೊಂಡು ಕ್ರಮ ಜರುಗಿಸುತ್ತೇವೆ. ಉನ್ನತ ತಂತ್ರಾಂಶ ಬಳಸಿ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯನ್ನು ನಿಗದಿ ಮಾಡಲಾಗಿರುತ್ತದೆ. ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಕೆಲ ಸದಸ್ಯರ ಆಕ್ಷೇಪ:

ಮೀಸಲಾತಿ ಪುನಾರಾವರ್ತನೆಯಾಗಿದೆ ಎಂದು ಸಭೆಯ ಬಳಿಕ ತಾಲೂಕಿನ ತಂಗಡಗಿ, ಕೋಳೂರು, ಢವಳಗಿ, ಬಿದರಕುಂದಿ ಗ್ರಾಪಂಗಳ ಕೆಲ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮೌಖಿಕವಾಗಿ ಆಕ್ಷೇಪ ಸಲ್ಲಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು, ಆಯೋಗದ ನಿರ್ದೇಶನದಂತೆ ಸಾಧ್ಯವಾದಷ್ಟು ಮಟ್ಟಿಗೆ ಮೀಸಲಾತಿ ಪುನಾರಾವರ್ತನೆ ಆಗದಂತೆ ನೋಡಿಕೊಳ್ಳಲಾಗಿದೆ. ಎಲ್ಲೋ ಒಂದು ಎರಡು ಪಂಚಾಯಿತಿಯಲ್ಲಿ ಆಗಿರಬಹುದು, ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ ಎಂದರು.

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಪ್ರಕಟ:

ತಾಲೂಕಿನ 21 ಗ್ರಾಪಂಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ತಲಾ 11 ಸ್ಥಾನಗಳನ್ನು ಮಹಿಳಾ ವರ್ಗಕ್ಕೆ ಮೀಸಲಿಟ್ಟು ಹಂಚಿಕೆ ಮಾಡಿದ್ದು, ಶೇ. 50ರಷ್ಟು ಮಹಿಳಾ ಸಮಾನತೆಗೆ ಆದ್ಯತೆ ಸಿಕ್ಕಿದಂತಾಗಿದೆ.
ಅಧ್ಯಕ್ಷ ಸ್ಥಾನಕ್ಕೆ 11 ಮಹಿಳಾ ಮೀಸಲು ಸ್ಥಾನಗಳಲ್ಲಿ 3 ಎಸ್‌ಸಿ ವರ್ಗ, ಐದು ಸಾಮಾನ್ಯ ವರ್ಗ, ಕೆಟಗರಿ ಎ ಎರಡು ಸ್ಥಾನ, ಎಸ್‌ಟಿ ಒಂದು ಸ್ಥಾನವನ್ನು ಹಂಚಿಕೆ ಮಾಡಲಾಗಿದೆ.

ಇನ್ನುಳಿದಂತೆ ಆರು ಸಾಮಾನ್ಯ, ಕೆಟಗರಿ ಎ, ಕೆಟಗರಿ ಬಿ ತಲಾ ಒಂದು ಸ್ಥಾನ, ಎಸ್‌ಸಿ ಎರಡು ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ 11ರಲ್ಲಿ ಎಸ್‌ಸಿ ವರ್ಗದಿಂದ ಮೂವರು, ಕೆಟಗರಿ ಎ ವರ್ಗದಿಂದ ಎರಡು, ಸಾಮಾನ್ಯ ವರ್ಗದಿಂದ ಐದು ಸಾಮಾನ್ಯ, ಒಂದು ಎಸ್ಟಿ ವರ್ಗಕ್ಕೆ ಹಂಚಿಕೆ ಮಾಡಲಾಗಿದೆ.

ABOUT THE AUTHOR

...view details