ಕರ್ನಾಟಕ

karnataka

ETV Bharat / state

ಹುಷಾರ್​..! ಮಾಸ್ಕ್ ವಿಚಾರವಾಗಿ ಸರ್ಕಾರಿ ಸಿಬ್ಬಂದಿ ಜೊತೆ ಕಿರಿಕ್ ಮಾಡಿದ್ರೆ ಬೀಳುತ್ತೆ ಎಫ್​​​ಐಆರ್ - ಮಾಸ್ಕ್​​ ವಿಚಾರವಾಗಿ ಎಚ್ಚರಿಕೆ ನೀಡಿದ ವಿಜಯಪುರ ಡಿಸಿ

ಮಾಸ್ಕ್ ವಿಚಾರವಾಗಿ ಸರ್ಕಾರಿ ಇಲಾಖೆಯ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರೆ ಅಂಥವರ ವಿರುದ್ಧ ಎಫ್ ಐ ಆರ್ ದಾಖಲಿಸಲಾಗುವುದು ಎಂದು ವಿಜಯಪುರ ಜಿಲ್ಲಾಧಿಕಾರಿ ಖಡಕ್​​ ಸಂದೇಶ ರವಾನಿಸಿದ್ದಾರೆ.

vijayapura DC speak about mask
ಮಾಸ್ಕ್ ವಿಚಾರವಾಗಿ ಸರ್ಕಾರಿ ಸಿಬ್ಬಂದಿ ಜೊತೆ ಕಿರಿಕ್ ಮಾಡಿದರೆ ಎಫ್​​​ಐಆರ್ : ವಿಜಯಪುರ ಡಿಸಿ

By

Published : Oct 1, 2020, 4:09 PM IST

ವಿಜಯಪುರ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಭೀತಿಯನ್ನು ಕಡಿಮೆ ಮಾಡಲು ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿದೆ. ಮಾಸ್ಕ್ ಹಾಕದೇ ಇರುವವರಿಗೆ ದಂಡ ವಿಧಿಸಲು ಮುಂದಾಗಿದೆ. ಇದಕ್ಕೆ ಇನ್ನೊಂದು ಹೆಜ್ಜೆ ಮುಂದೆ ಹೋಗಿರುವ ವಿಜಯಪುರ ಜಿಲ್ಲಾಡಳಿತ, ಮಾಸ್ಕ್ ವಿಚಾರವಾಗಿ ಸರ್ಕಾರಿ ಇಲಾಖೆ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರೆ ಅಂಥವರ ವಿರುದ್ಧ ಎಫ್ ಐ ಆರ್ ದಾಖಲಿಸುವ ಬಗ್ಗೆ ಖಡಕ್​​ ಸಂದೇಶ ರವಾನಿಸಿದೆ.

ಮಾಸ್ಕ್ ವಿಚಾರವಾಗಿ ಸರ್ಕಾರಿ ಸಿಬ್ಬಂದಿ ಜೊತೆ ಕಿರಿಕ್ ಮಾಡಿದರೆ ಎಫ್​​​ಐಆರ್: ವಿಜಯಪುರ ಡಿಸಿ

ರಾಜ್ಯದಲ್ಲಿ ಮಹಾಮಾರಿ ಕೊರೊನಾ ತಾಂಡವವಾಡುತ್ತಿದೆ. ರೋಗ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಸಹ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಇದಕ್ಕಾಗಿ ರಸ್ತೆಯಲ್ಲಿ ಹೋಗುವ ಜನರು ಮಾಸ್ಕ್ ಧರಿಸದಿದ್ದರೆ ದಂಡ ವಿಧಿಸಲು ಸೂಚನೆ ನೀಡಿದೆ. ಅದರ ಪ್ರಮಾಣವನ್ನು ಸಹ ಮತ್ತಷ್ಟು ಹೆಚ್ಚಿಸಿದೆ. ಆದರೆ ದಂಡ ವಿಧಿಸುವ ಅಧಿಕಾರವನ್ನು ಪೊಲೀಸ್ ಇಲಾಖೆ ಬದಲು ಆಯಾ ಸ್ಥಳೀಯ ಆಡಳಿತ ಸಿಬ್ಬಂದಿಗೆ ನೀಡಿದೆ.

ಜನ ಪೊಲೀಸ್ ಸಮವಸ್ತ್ರಕ್ಕೆ ಹೆದರದವರು ಇನ್ನೂ ಸಾಮಾನ್ಯ ಜನರ ಸಮವಸ್ತ್ರದಲ್ಲಿರುವ ಪಾಲಿಕೆ ಅಧಿಕಾರಿಗಳಿಗೆ ಹೆದರುವ ಸಾಧ್ಯತೆ ಕಡಿಮೆ ಇದೆ. ಮಾಸ್ಕ್ ಹಾಕದವರಿಗೆ ದಂಡ ವಿಧಿಸಲು ಮುಂದಾದರೆ ಜಗಳ, ವಾಗ್ವಾದ ನಡೆಯಬಹುದು. ಇದಕ್ಕಾಗಿ ಜಿಲ್ಲಾಡಳಿತ ಅನಾವಶ್ಯಕವಾಗಿ ಸರ್ಕಾರಿ ಸಿಬ್ಬಂದಿ ಜೊತೆ ವಾಗ್ವಾದ ನಡೆಸಿದರೆ ಅಂಥವರಿಗೆ ಮೊದಲು ಎಚ್ಚರಿಕೆ ನೀಡಿ ದಂಡ ವಸೂಲಿ ಮಾಡಲಿದ್ದಾರೆ. ಇದಕ್ಕೂ ತಪ್ಪಿ ಪದೇ ಪದೇ ಕಿರಿಕ್ ಮಾಡುವ ಜನರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಅವರ ಮೇಲೆ ಎಫ್ ಐ ಆರ್ ಸಹ ದಾಖಲಿಸುವ ಎಚ್ಚರಿಕೆಯನ್ನು ಜಿಲ್ಲಾಡಳಿತ ನೀಡಿದೆ.

ಕೊರೊನಾ ನಿಯಂತ್ರಣ ವಿಚಾರವಾಗಿ ವಿಜಯಪುರ ಜಿಲ್ಲಾಡಳಿತ ಸಾಕಷ್ಟು ಶ್ರಮ ವಹಿಸಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿಯೇ ಕೊರೊನಾ ಪಾಸಿಟಿವ್ ಪ್ರಕರಣ ನಿಯಂತ್ರಣದಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ಮರಣ ಪ್ರಮಾಣ ಸಹ ತಗ್ಗಿಸಲು ಖಾಸಗಿ ಕೋವಿಡ್ ಹಾಗೂ ಸರ್ಕಾರಿ ಕೋವಿಡ್ ಕೇಂದ್ರದಲ್ಲಿ ಅಗತ್ಯ ಮುಂಜಾಗ್ರತೆ ವಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸುನೀಲಕುಮಾರ್​ ಹೇಳಿದ್ದಾರೆ.

ABOUT THE AUTHOR

...view details