ಮುದ್ದೇಬಿಹಾಳ : ಬೆಕ್ಕು, ನಾಯಿಗಳಂತಹ ಸಾಕು ಪ್ರಾಣಿಗಳ ಬರ್ತ್ ಡೇ ಮಾಡುವುದನ್ನು ನೀವೆಲ್ಲ ಕೇಳಿದ್ದೀರಿ, ನೋಡಿದ್ದೀರಿ. ಆದರೆ ಇಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ನಿವೃತ್ತ ಪಿಎಸ್ಐವೊಬ್ಬರ ಮನೆಯ ಸದಸ್ಯರು, ಸಾಕಿದ ಶ್ವಾನಕ್ಕೆ ಸೀಮಂತ ಕಾರ್ಯ ಮಾಡುವ ಮೂಲಕ ವಿಶೇಷ ಶ್ವಾನ ಪ್ರೀತಿ ತೋರಿದ್ದಾರೆ.
ವಿದ್ಯಾನಗರದ ನಿವೃತ್ತ ಪಿಎಸ್ಐ ಟಿ.ಜೆ.ನೆಲವಾಸಿ ಅವರ ಮನೆಯಲ್ಲಿರುವ ಜೂನ್ ಎಂಬ ಲ್ಯಾಬ್ರಡಾರ್ ತಳಿಯ ಶ್ವಾನ ಗರ್ಭ ಧರಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಅದಕ್ಕೆ ಶಾಲು ಹೊದೆಸಿ ಹೂ ಮುಡಿಸಿ ಬೇಕಾದ ತಿಂಡಿ ತಿನಿಸುಗಳನ್ನು ಕೊಟ್ಟಿದ್ದಾರೆ. ಅಲ್ಲದೇ ಆರುತಿ ಕೂಡಾ ಬೆಳಗಿದ್ದಾರೆ.