ವಿಜಯಪುರ: ಅಪ್ರಾಪ್ತೆ ಬಾಲಕಿಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಬಬಲೇಶ್ವರದ ಶ್ರೀಧರ ದಶರಥ ಇಮ್ಮನದ ಶಿಕ್ಷೆಗೆ ಗುರಿಯಾದ ವ್ಯಕ್ತಿ.
ವಿಜಯಪುರದ 13 ವರ್ಷದ ಅಪ್ರಾಪ್ತೆಯನ್ನು ಅಪರಾಧಿ ಪ್ರೀತಿಸಿದ್ದ. ಅಂಗಡಿಗೆ ಸಾಮಗ್ರಿ ತರಲು ಹೋಗಿದ್ದ ಬಾಲಕಿಯನ್ನು ಶ್ರೀಧರ ಕರೆದುಕೊಂಡು ಹೋಗಿ ಅಥಣಿಯಲ್ಲಿರುವ ತನ್ನ ಸಂಬಂಧಿಕರ ಖಾಲಿ ಮನೆಯಲ್ಲಿಟ್ಟಿದ್ದನು. ಅಕ್ರಮವಾಗಿ ಇರಿಸಿದ್ದಲ್ಲದೇ ಲೈಂಗಿಕ ಸಂಬಂಧವನ್ನೂ ಬೆಳೆಸಿದ್ದ. ಈ ಬಗ್ಗೆ ಗಾಂಧಿಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.