ಕರ್ನಾಟಕ

karnataka

ETV Bharat / state

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ.. ಮಸ್ಟರಿಂಗ್ ಕೇಂದ್ರಕ್ಕೆ ಡಿಸಿ ಎಸ್ಪಿ ಭೇಟಿ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 35 ವಾರ್ಡ್​ಗಳಿಗೆ ನಡೆಯಲಿರುವ ಮತದಾನ ವೇಳೆ 1,43,616 ಗಂಡು, 1,44,499 ಹೆಣ್ಣು, 100 ಇತರ ಹಾಗೂ 73 ಸೇವಾ ಮತದಾರರು ಸೇರಿದಂತೆ 2,88,288 ಮತದಾರರು ತಮ್ಮ ಮತವನ್ನು ಚಲಾಯಿಸಲಿದ್ದಾರೆ.

By

Published : Oct 28, 2022, 9:59 AM IST

Updated : Oct 28, 2022, 12:48 PM IST

DC and SP visited Darbara High School grounds
ದರಬಾರ ಹೈಸ್ಕೂಲ್ ಮೈದಾನಕ್ಕೆ ಭೇಟಿ ನೀಡಿದ ಡಿಸಿ ಹಾಗೂ ಎಸ್​ಪಿ

ವಿಜಯಪುರ:ವಿಜಯಪುರ ಮಹಾನಗರ ಪಾಲಿಕೆಯ 35 ವಾರ್ಡ್​ಗಳಿಗೆ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಿನ್ನೆ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನ್ನಮ್ಮನವರ ಹಾಗೂ ಎಸ್ಪಿ ಆನಂದಕುಮಾರ ನಗರದ ದರಬಾರ ಹೈಸ್ಕೂಲ್ ಮೈದಾನಕ್ಕೆ ಭೇಟಿ ನೀಡಿ, ಚುನಾವಣೆ-ಮತದಾನಕ್ಕೆ ಬೇಕಾಗುವ ಎಲ್ಲ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆಯೇ ಎಂದು ಪರಿಶೀಲನೆ ನಡೆಸಿದರು.‌

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 358 ನಾಮಪತ್ರಗಳು ಸ್ವೀಕೃತಿಯಾಗಿದ್ದು, ಪರಿಶೀಲನೆ ನಂತರ ಒಟ್ಟು 230 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿದ್ದವು, 119 ನಾಮಪತ್ರಗಳು ತಿರಸ್ಕೃತ ವಾಗಿವೆ. ಕ್ರಮಬದ್ಧವಾದ ಅಭ್ಯರ್ಥಿಗಳ ಪೈಕಿ ಒಟ್ಟು 56 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದಿದ್ದು, ಅಂತಿಮವಾಗಿ ಒಟ್ಟು 174 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಅವರ ಪೈಕಿ ಕಾಂಗ್ರೆಸ್ 35, ಬಿಜೆಪಿ-33, ಜೆಡಿಎಸ್-20, ಎಎಪಿ-15, ಎ.ಐ.ಎಂ.ಐ.ಎಂ-4, ಕೆ.ಆರ್.ಎಸ್ ಹಾಗೂ ಜನತಾ ಪಾರ್ಟಿ ತಲಾ -3, ಎಸ್.ಡಿ.ಪಿ.ಐ-2, ಬಿ.ಎಸ್.ಪಿ-1 ಮತ್ತು ಪಕ್ಷೇತರರು-58 ಅಂತಿಮ ಕಣದಲ್ಲಿದ್ದಾರೆ ಎಂದು ಅವರು ತಿಳಿಸಿದರು.

ದರಬಾರ ಹೈಸ್ಕೂಲ್ ಮೈದಾನಕ್ಕೆ ಭೇಟಿ ನೀಡಿದ ಡಿಸಿ ಹಾಗೂ ಎಸ್​ಪಿ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಒಟ್ಟು 303 ಮತಗಟ್ಟೆಗಳಿಗೆ ಪ್ರತಿ ಮತಗಟ್ಟೆಗೆ ಒಬ್ಬರಂತೆ ಮತಗಟ್ಟೆ ಅಧ್ಯಕ್ಷಾಧಿಕಾರಿ, ಸಹಾಯಕ ಅಧ್ಯಕ್ಷಾಧಿಕಾರಿ ಹಾಗೂ ಇಬ್ಬರಂತೆ 606 ಮತಗಟ್ಟೆ ಅಧಿಕಾರಿಗಳು, ಶೇ. 20 ಹೆಚ್ಚುವರಿಯಾಗಿ 242 ಕಾಯ್ದಿರಿಸಿದ ಸಿಬ್ಬಂದಿ ಸೇರಿದಂತೆ ಒಟ್ಟು 1454 ಅಧಿಕಾರಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ.

ಮಹಾನಗರ ಪಾಲಿಕೆ ಚುನಾವಣೆಗೆ ಒಟ್ಟು 303 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 35 ವಾರ್ಡ್​ಗಳಿಗೆ ನಡೆಯಲಿರುವ ಮತದಾನ ವೇಳೆ 1,43,616 ಗಂಡು, 1,44,499 ಹೆಣ್ಣು, 100 ಇತರ ಹಾಗೂ 73 ಸೇವಾ ಮತದಾರರು ಸೇರಿದಂತೆ 2,88,288 ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.

ಅಧಿಕಾರಿ-ಸಿಬ್ಬಂದಿ ನಿಯೋಜನೆ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಸಂಬಂಧಪಟ್ಟಂತೆ ಮಾದರಿ ನೀತಿ ಸಂಹಿತೆ ಪಾಲನೆ ಕುರಿತಾಗಿ ಒಟ್ಟು 21 ಸೆಕ್ಟರ್ ಅಧಿಕಾರಿಗಳನ್ನು, ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲಿಸಲು 14 ವೆಚ್ಚ ಪರಿಶೀಲನಾ ಅಧಿಕಾರಿಗಳು, ಮತಗಟ್ಟೆ ಅಧಿಕಾರಿಗಳಿಗೆ ಸೂಕ್ತ ತಿಳಿವಳಿಕೆ ನೀಡಲು 35 ಮಾಸ್ಟರ್ ಟ್ರೇನ್‍ರ್‍ಗಳನ್ನು ಹಾಗೂ ಮತಗಟ್ಟೆ ಅಧಿಕಾರಿಗಳು ಮತಗಟ್ಟೆಗೆ ಹೋಗಲು ಅನುಕೂಲವಾಗುವಂತೆ 60 ಮಾರ್ಗಾಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳ ಬಳಕೆ:ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಕೆ ಮಾಡಲಾಗುವುದು. ಬ್ಯಾಲೆಟ್ ಯುನಿಟ್-303, ಕಂಟ್ರೋಲ್ ಯುನಿಟ್- 303 ಕಾಯ್ದಿರಿಸಿದ ಬಿ.ಯು-70 ಸಿ.ಯು-70 ಹೀಗೆ ಒಟ್ಟು- ಬಿ.ಯು. 373, 373 ಸಿಯುಗಳನ್ನು ಬಳಸಲಾಗುತ್ತಿದೆ.

ಅಂಚೆ ಮತಪತ್ರಗಳ ಮತ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ, ಒಟ್ಟು ಸೇವಾ ಮತದಾರರು 74 ಇದ್ದು ಅಂಚೆ ಮತ ಪತ್ರವನ್ನು ರವಾನಿಸಲಾಗಿದೆ ಎಂದು ತಿಳಿಸಿದ್ದಾರೆ. ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು, ಸಿಬ್ಬಂದಿ ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರಾಗಿದ್ದಲ್ಲಿ, ಅಂತಹ ಒಟ್ಟು 288 ಅಧಿಕಾರಿ- ಸಿಬ್ಬಂದಿಗೆ ಅಂಚೆ ಮತಪತ್ರಗಳನ್ನು ಆಯಾ ಚುನಾವಣಾಧಿಕಾರಿಗಳಿಂದ ರವಾನಿಸಲಾಗಿದೆ.

ಮಸ್ಟರಿಂಗ್, ಡಿ-ಮಸ್ಟರಿಂಗ್, ಭದ್ರತಾ ಕೊಠಡಿ ಹಾಗೂ ಮತ ಎಣಿಕೆ ಕಾರ್ಯ ನಗರದ ವಿ.ಬಿ. ದರಬಾರ ಶಾಲೆಯಲ್ಲಿ ನಡೆಯಲಿದೆ. ಚುನಾವಣೆಗೆ ಸ್ಪರ್ಧಿಸಿರುವ ಚುನಾವಣಾಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸ್ ಬಂದೋಬಸ್ತ್: ಒಟ್ಟು 303 ಮತಗಟ್ಟೆಗಳ ಪೈಕಿ 48 ಅತೀ ಸೂಕ್ಷ್ಮ, 83 ಸೂಕ್ಷ್ಮ ಹಾಗೂ 172 ಸಾಧಾರಣ ಮತಗಟ್ಟೆ ಎಂದು ಗುರುತಿಸಲಾಗಿದ್ದು, ಅತೀ ಸೂಕ್ಷ್ಮ ಮತಗಟ್ಟೆಗೆ ಒಬ್ಬ ಹೆಡ್ ಕಾನ್ಸ್​ಟೇಬಲ್​ ಹಾಗೂ ಒಬ್ಬ ಪೊಲೀಸ್ ಕಾನ್ಸ್​ಟೇಬಲ್​, ಸೂಕ್ಷ್ಮ ಮತಗಟ್ಟೆಗೆ ಒಬ್ಬ ಪೊಲೀಸ್ ಕಾನ್ಸ್​ಟೇಬಲ್​ ಹಾಗೂ ಒಬ್ಬ ಹೋಮ್ ಗಾರ್ಡ್ ಮತ್ತು ಸಾಧಾರಣಾ ಮತಗಟ್ಟೆಗೆ ಒಬ್ಬ ಪೊಲೀಸ್ ಕಾನ್ಸ್​ಟೇಬಲ್​​ಗಳನ್ನು ಇಲಾಖೆಯಿಂದ ನಿಯೋಜಿಸಲಾಗಿದೆ ಎಂದು ಎಸ್ಪಿ ಆನಂದ ಕುಮಾರ್​ ತಿಳಿಸಿದ್ದಾರೆ.‌ ಒಟ್ಟಾರೆಯಾಗಿ 3 ಡಿವೈಎಸ್​ಪಿ, 9 ಸಿಪಿಐ, 25 ಪಿಎಸ್​ಐ, 76 ಎಎಸ್​ಐ, 121 ಹೆಡ್ ಕಾನ್ಸ್​ಟೇಬಲ್​​, 385 ಪೋಲಿಸ್ ಕಾನ್ಸಟೇಬಲ್, 150 ಹೋಂ ಗಾರ್ಡ್, 4 ಐಆರ್​ಬಿ ಹಾಗೂ 8 ಡಿಎಆರ್​ಗಳನ್ನು ಪೊಲೀಸ್​ ಇಲಾಖೆಯಿಂದ ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿಜಯಪುರ ವಿ.ವಿ ದರಬಾರ ಕೇಂದ್ರಕ್ಕೆ ಡಿಸಿ, ಎಸ್​ಪಿ ಭೇಟಿ: ಮಸ್ಟರಿಂಗ್ ಕೇಂದ್ರವಾದ ವಿಜಯಪುರ ವಿ.ವಿ ದರಬಾರ ಕೇಂದ್ರಕ್ಕೆ ನೀಡಿದ ಸಂದರ್ಭದಲ್ಲಿ ಮಸ್ಟರಿಂಗ್ ಕೇಂದ್ರದ ಸಿಬ್ಬಂದಿಗೆ ಸೂಚನೆ ನೀಡಿ, ಶಾಂತಿಯುತ ಚುನಾವಣೆ - ಮತದಾನಕ್ಕಾಗಿ ತಮಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಬೇಕು.

ಚುನಾವಣಾ ಕಾರ್ಯದಲ್ಲಿ ಯಾವುದೇ ಅಡೆ - ತಡೆ ಗೊಂದಲ ಉಂಟಾದಲ್ಲಿ ಸಮಾಧಾನದಿಂದ ಪರಿಹರಿಸಿಕೊಳ್ಳಲು ಪ್ರಯತ್ನಿಸಿ, ಯಾವುದೇ ಸಮಸ್ಯೆ ಉಂಟಾದಲ್ಲಿ ಸೆಕ್ಟರ್ ಅಧಿಕಾರಿ, ಚುನಾವಣಾಧಿಕಾರಿಗಳನ್ನು ಸಂಪರ್ಕಿಸಿ, ಪರಿಹಾರ ಕಂಡುಕೊಂಡು ಧೃತಿಗೆಡದೆ ಯಾವುದೇ ಲೋಪವಾಗದಂತೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಎಸ್​ಪಿ ಸೂಚನೆ ನೀಡಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ಲೋಪ ದೋಷಗಳಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು. ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ, ಅತ್ಯಂತ ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಇದನ್ನೂ ಓದಿ:ಗ್ರಾಪಂಗಳಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಇಂದು ಉಪಚುನಾವಣೆ.. ಮತಕ್ಷೇತ್ರ ವ್ಯಾಪ್ತಿಯಲ್ಲಿ ವೇತನ ಸಹಿತ ರಜೆ

Last Updated : Oct 28, 2022, 12:48 PM IST

ABOUT THE AUTHOR

...view details