ಕರ್ನಾಟಕ

karnataka

ETV Bharat / state

ರಸ್ತೆಯಲ್ಲಿ ಚಿತ್ರ ಬಿಡಿಸಿ ಕೊರೊನಾ ಜಾಗೃತಿ: ವಿಜಯಪುರ ಜಿಲ್ಲಾಡಳಿತದ ವಿನೂತನ ಪ್ರಯೋಗ

ಡಿಸಿ ಕಚೇರಿ ಚೇಂಬರ್​ವರೆಗೂ ಜಾಗೃತಿಯ ಪೇಟಿಂಗ್ ಮಾಡಿಸಲಾಗಿದ್ದು ಕಚೇರಿಗೆ ಬರುವ ಸಾರ್ವಜನಿಕರಿಗೆ ಪ್ರತಿ ಕ್ಷಣ ಮಾಸ್ಕ್ ಧರಿಸುವ ಅವಶ್ಯಕತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ವಿನೂತನ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

ರಸ್ತೆಯಲ್ಲಿ ಚಿತ್ರ ಬಿಡಿಸಿ ಕೊರೊನಾ ಜಾಗೃತಿ
ರಸ್ತೆಯಲ್ಲಿ ಚಿತ್ರ ಬಿಡಿಸಿ ಕೊರೊನಾ ಜಾಗೃತಿ

By

Published : Mar 24, 2021, 12:07 PM IST

Updated : Mar 24, 2021, 12:36 PM IST

ವಿಜಯಪುರ: ಜಿಲ್ಲೆಯಲ್ಲಿ‌ ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜಿಲ್ಲಾಡಳಿತ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ವಿವಿಧ ಕೆಲಸಕ್ಕೆ ಜಿಲ್ಲಾಡಳಿತ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಜಿಲ್ಲಾಡಳಿತ ಆವರಣದ ರಸ್ತೆಯಲ್ಲಿ ಮಾಸ್ಕ್ ಧರಿಸಿ ಎನ್ನುವ ಸ್ಲೋಗನ್ ಪೇಂಟ್ ಸ್ವಾಗತಿಸುತ್ತಿದೆ. ಇದರ ಜತೆ ದೈಹಿಕ ಅಂತರ ಕಾಪಾಡುವ ಕಾರ್ಟೂನ್ ಪೇಂಟ್ ಮೂಲಕ ಚಿತ್ರ ಬಿಡಿಸಲಾಗುತ್ತಿದೆ. ಮಾಸ್ಕ್ ಧರಿಸದೇ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಹಾಗೂ ಪಟ್ಟಣ ಪ್ರದೇಶದಲ್ಲಿ ಮಾಸ್ಕ್ ಧರಿಸದ ಜನರಿಗೆ 250 ರೂ. ದಂಡ ಹಾಗೂ ಗ್ರಾಮೀಣ ಭಾಗದಲ್ಲಿ ಮಾಸ್ಕ್ ಧರಿಸದೇ ರಸ್ತೆಗೆ ಇಳಿಯುವ ಸಾರ್ವಜನಿಕರಿಗೆ 100 ರೂ. ದಂಡ ಕಡ್ಡಾಯವಾಗಿ ವಿಧಿಸಲಾಗುವದು ಎಂದು ಕಚೇರಿ ಆವರಣದ ರಸ್ತೆಯಲ್ಲಿ ಬರಹ ಬರೆದು ಎಚ್ಚರಿಸಿದ್ದಾರೆ.

ರಸ್ತೆಯಲ್ಲಿ ಚಿತ್ರ ಬಿಡಿಸಿ ಕೊರೊನಾ ಜಾಗೃತಿ

ಡಿಸಿ ಕಚೇರಿ ಚೇಂಬರ್​ವರೆಗೂ ಜಾಗೃತಿಯ ಪೇಟಿಂಗ್ ಮಾಡಿಸಲಾಗಿದ್ದು ಕಚೇರಿಗೆ ಬರುವ ಸಾರ್ವಜನಿಕರಿಗೆ ಪ್ರತಿ ಕ್ಷಣ ಮಾಸ್ಕ್ ಧರಿಸುವ ಅವಶ್ಯಕತೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ, ವಿನೂತನ ಜಾಗೃತಿ ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ. ಇದಕ್ಕೆ ಸಾರ್ವಜನಿಕರಿಂದಲೂ ಪ್ರಶಂಸೆ ವ್ಯಕ್ತವಾಗಿದೆ.

ಸ್ಥಳದಲ್ಲಿಯೇ ದಂಡ: ಕೊರೊನಾ ರೋಗ ಹರಡದಂತೆ ಮುನ್ನಚ್ಚರಿಕೆ ವಹಿಸಲು ಸಾರ್ವಜನಿಕರಿಗೆ ಪೇಟಿಂಗ್ ಮೂಲಕ ಜಾಗೃತಿ ಮೂಡಿಸುತ್ತಿರುವ ಜಿಲ್ಲಾಡಳಿತ ಇದರ ಜತೆ ಕಚೇರಿಗೆ ಬರುವ ಸಾರ್ವಜನಿಕರು ಮಾಸ್ಕ್ ಧರಿಸದೇ ಇದ್ದವರಿಗೆ ಸ್ಥಳದಲ್ಲಿಯೇ 250ರೂ. ದಂಡ ವಿಧಿಸುವ ಕೆಲಸವನ್ನು ಸಹ ಮಾಡುತ್ತಿದೆ.

ಓದಿ : 24 ಗಂಟೆಗಳಲ್ಲಿ 47,262 ಮಂದಿಗೆ ಸೋಂಕು, ಈವರೆಗೆ 5 ಕೋಟಿ ಜನರಿಗೆ ಕೋವಿಡ್​ ಲಸಿಕೆ

ಮೊದಲು ದಿನವೇ ಸುಮಾರು 4000 ರೂ. ರಷ್ಟು ದಂಡದ ರೂಪದಲ್ಲಿ ಹಣವನ್ನು ಜಿಲ್ಲಾಡಳಿತ ಸಾರ್ವಜನಿಕರಿಂದ ವಸೂಲಿ‌ ಮಾಡಿದೆ. ದಂಡ ನೀಡಿದವರಿಗೆ ರಸೀದಿ ನೀಡಲಾಗುತ್ತಿದೆ. ಹಾಗಂತ ರಸೀದಿ ಇದ್ದರೆ, ಆ ದಿನ ಮಾಸ್ಕ್ ಧರಿಸದೇ ಸುತ್ತಾಡಬಹುದು ಎಂದು ತಿಳಿದುಕೊಳ್ಳಬೇಡಿ.‌ ದಂಡ ಹಾಕಿದ ಮೇಲೆಯೂ ಮಾಸ್ಕ್ ಧರಿಸದೇ ಇದ್ದರೆ, ಮುಂದೆ ಎಲ್ಲಾದರೂ ಮಹಾನಗರ ಪಾಲಿಕೆಯಾಗಲಿ, ಪೊಲೀಸ್ ಇಲಾಖೆ ಸಿಬ್ಬಂದಿ ಮಾಸ್ಕ್ ಪರಿಶೀಲನೆ ನಡೆಸುವ ವೇಳೆ ಮಾಸ್ಕ್ ಧರಿಸದೇ ಸಿಕ್ಕಿ ಹಾಕಿಕೊಂಡರೆ ಅಲ್ಲಿಯೂ ಮತ್ತೆ 250 ರೂ. ದಂಡ ನೀಡಲೇ ಬೇಕು. ಈ ಮೂಲಕ ದಂಡಕ್ಕೆ ಹೆದರಿಯಾದರೂ ಸಾರ್ವಜನಿಕರು ಮಾಸ್ಕ್ ಧರಿಸಿ ಕೊರೊನಾ ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು ಎನ್ನುವ ಉದ್ದೇಶ ಜಿಲ್ಲಾಡಳಿತದ್ದಾಗಿದೆ.‌

Last Updated : Mar 24, 2021, 12:36 PM IST

ABOUT THE AUTHOR

...view details