ವಿಜಯಪುರ: ಪವರ್ ಸ್ಟಾರ್ ಪುನೀತ್ರಾಜಕುಮಾರ್ ಅಗಲಿ ಏಳು ತಿಂಗಳುಗಳೇ ಕಳೆದರೂ ಅವರ ನೆನಪು ಮಾತ್ರ ಇಂದಿಗೂ ಜನಮಾನಸ ಹಾಗೂ ಅಭಿಮಾನಿಗಳಲ್ಲಿ ಹಚ್ಚಹಸಿರಾಗಿದೆ. ಅಪ್ಪು ಅಭಿಮಾನಿ ಬಸವರಾಜ್ ಮದುವೆಗೆ ಪುನೀತ್ ರಾಜಕುಮಾರ್ ಅವರನ್ನು ಆಹ್ವಾನಿಸಬೇಕು ಎಂದು ಆಸೆ ಹೊಂದಿದ್ದರು. ಆದರೆ, 'ರಾಜಕುಮಾರ್' ಇಹಲೋಕತ್ಯಜಿಸಿದ್ದರಿಂದ ಅಭಿಮಾನಿಯ ಆಸೆ ಈಡೇರಲಿಲ್ಲ. ಹೀಗಾಗಿ ಪುನೀತ್ ಭಾವಚಿತ್ರದ ಎದುರು ಮದುವೆ ಆಗುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಬಸವರಾಜ ಮತ್ತು ಶೋಭಾ ಮದುವೆ ವೇದಿಕೆಯ ಎರಡೂ ಬದಿಯಲ್ಲಿ ಪುನೀತ್ ಅವರ ಭಾವಚಿತ್ರ ಅಳವಡಿಸಲಾಗಿತ್ತು. ವಧು - ವರನಿಗೆ ಶುಭಾಶಯ ಕೋರಲು ಬರುವವರು ಪುನೀತ್ ಭಾವಚಿತ್ರ ನೋಡಿ ಅವರನ್ನು ನೆನೆಯುವ ದೃಶ್ಯ ಕಂಡು ಬಂತು. ಇದರ ಜತೆ ಹಲವು ಸ್ನೇಹಿತರು ನವಜೋಡಿಗೆ ನೆನಪಿನ ಕಾಣಿಕೆಯಾಗಿ ಪುನೀತ್ ರಾಜಕುಮಾರ ಅವರ ಭಾವಚಿತ್ರ ನೀಡಿ, ಹರಸಿದರು.