ಕರ್ನಾಟಕ

karnataka

ETV Bharat / state

ವಿಜಯಪುರ ಜಿಲ್ಲಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ.. ಸಂಸದ ಭಗವಂತ ಖೂಬಾ ಎದುರೇ ಭಿನ್ನಮತ ಬಹಿರಂಗ - ದರ್ಬಾರ್ ಕಾಲೇಜ್ ಮೈದಾನದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಜನ ಜಾಗೃತಿ

ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಇದೆ ಎಂಬುದು ಎದ್ದು ಕಂಡಿದ್ದು, ರಾಜ್ಯ ವಕ್ತಾರರಾಗಿ ಜಿಲ್ಲೆಗೆ ಆಗಮಿಸಿದ್ದ ಸಂಸದ ಭಗವಂತ ಖೂಬಾ ಎದುರೇ ಭಿನ್ನಮತ ಬಹಿರಂಗಗೊಂಡಿತು.

vijayapu-district-dissident-in-bjp
ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಜನ ಜಾಗೃತಿ ಕಾರ್ಯಕ್ರಮ

By

Published : Jan 12, 2020, 10:45 PM IST

ವಿಜಯಪುರ: ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತ ಇದೆ ಎಂಬುದು ಎದ್ದು ಕಂಡಿದ್ದು, ರಾಜ್ಯ ವಕ್ತಾರರಾಗಿ ಜಿಲ್ಲೆಗೆ ಆಗಮಿಸಿದ್ದ ಸಂಸದ ಭಗವಂತ ಖೂಬಾ ಎದುರೇ ಭಿನ್ನಮತ ಬಹಿರಂಗಗೊಂಡಿತು. ದರ್ಬಾರ್ ಕಾಲೇಜ್ ಮೈದಾನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಆಗಮಿಸಬೇಕಾಗಿತ್ತು. ಹೀಗಾಗಿ ಜಿಲ್ಲೆಯ ಬಿಜೆಪಿಯ ಎರಡು ಬಣಗಳ ಮುಖಂಡರು ಅವರನ್ನು ಸ್ವಾಗತಿಸಲು ಕಾಯ್ದಿದ್ದರು. ಆದರೆ ಅನಿವಾರ್ಯ ಕಾರಣದಿಂದ ಅವರು ಬರಲು ಸಾಧ್ಯವಾಗಲಿಲ್ಲ. ಅವರ ಬದಲಿಗೆ ಬೀದರ್ ಸಂಸದ ಭಗವಂತ ಖೂಬಾ ಅವರನ್ನು ಕಳುಹಿಸಿದ್ದರು.

ಎಂದಿನಂತೆ ಕಾರ್ಯಕ್ರಮದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಉತ್ತರಕ್ಕೊಬ್ಬರು, ದಕ್ಷಿಣಕ್ಕೊಬ್ಬರು ಕುಳಿತು ತಮ್ಮ ಮುನಿಸು ಮುಂದುವರೆಸಿದರು. ಇವರ ಜತೆ ಸಂಸದರ ಹಿಂಬಾಲಕರಾದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಕೊನೆ ಕುರ್ಚಿಯಲ್ಲಿ ಕುಳಿತು ಮೌನಕ್ಕೆ ಶರಣಾಗಿದ್ದರು.

ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಜನ ಜಾಗೃತಿ ಕಾರ್ಯಕ್ರಮ

ಶಾಸಕ ಯತ್ನಾಳ ತಮ್ಮ ಭಾಷಣದಲ್ಲಿ ಅಪ್ಪಿ ತಪ್ಪಿ ಸಂಸದರಾಗಲಿ, ಮಾಜಿ ಸಚಿವರ ಹೆಸರನ್ನು ಪ್ರಸ್ತಾಪಿಸಲಿಲ್ಲ. ಅದೇ ರೀತಿಯಾಗಿ ಸಂಸದರು ಹಾಗೂ ಮಾಜಿ ಸಚಿವರು ಸಹ ಯತ್ನಾಳ ಹೆಸರು ಪ್ರಸ್ತಾಪಿಸದೇ ತಮ್ಮ ಮುನಿಸು ಬಹಿರಂಗವಾಗಿಯೇ ತೋಡಿಕೊಂಡರು. ಇದು ಹೊರಗಿಂದ ಬಂದವರಿಗೆ ಇರಿಸಿ ಮುರಿಸು ಉಂಟು ಮಾಡಿತು. ಎರಡು ತಿಂಗಳ ಹಿಂದೆ ರೈಲು ನಿಲ್ದಾಣದ ಆವರಣದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಶಾಸಕ ಯತ್ನಾಳ ಹಾಗೂ ಸಂಸದ ರಮೇಶ ಜಿಗಜಿಣಗಿ ಭಾಗವಹಿಸಿದ್ದ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಇದು ರಾಜ್ಯ ಬಿಜೆಪಿ ಮುಖಂಡರ ತಲೆನೋವಿಗೆ ಕಾರಣವಾಗಿತ್ತು.

ವಿಚಿತ್ರವೆಂದರೆ ಇಂದು ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆರ್.ಎಸ್. ಪಾಟೀಲ್ ಕೂಚಬಾಳ ನೇಮಕವಾಗಿದ್ದಾರೆ. ಇವರು ಮುಂದೆ ಈ ಎರಡು ಬಣಗಳ ನಡುವೆ ಸಮನ್ವಯ ಸಾಧಿಸುವದೇ ದೊಡ್ಡ ಸವಾಲಾಗಲಿದೆ.

ABOUT THE AUTHOR

...view details