ವಿಜಯಪುರ:2ಎ ಮೀಸಲಾತಿ ಬೇಡಿಕೆ ಈಡೇರಿಸುವುದಾಗಿ 6 ತಿಂಗಳ ಗಡುವು ಕೊಟ್ಟಿದ್ದಾರೆ. ಬೇಡಿಕೆ ಈಡೇರದಿದ್ದರೆ ಅಕ್ಟೋಬರ್ 15ರಿಂದ ಮತ್ತೆ ಉಗ್ರ ಹೋರಾಟ ಆರಂಭವಾಗಲಿದೆ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಎಚ್ಚರಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಮೀಸಲಾತಿ ಕುರಿತು ಅವರ ಮಾತಿಗೆ ಗೌರವ ಕೊಟ್ಟು ಹೋರಾಟ ಸ್ಥಗಿತಗೊಳಿಸಿದ್ದೇವೆ. ಇದು ನಮ್ಮ ಕೊನೆಯ ಹೋರಾಟ, ಮಾಡು ಇಲ್ಲವೆ ಮಡಿ ಎಂಬ ರೂಪದಲ್ಲಿದೆ ಎಂದರು.
ಬಳಿಕ ಮಾತನಾಡಿದ ಪಂಚಮಸಾಲಿ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, 6 ತಿಂಗಳಲ್ಲಿ ಬೇಡಿಕೆ ಈಡೇರಿಸೋದಾಗಿ ಸಿಎಂ ಭರವಸೆ ಕೊಟ್ಟಿದ್ದಾರೆ. ಒಂದು ವೇಳೆ ಈಡೇರದಿದ್ರೆ ಮತ್ತೆ 20 ಲಕ್ಷ ಜನರನ್ನು ಸೇರಿಸಿ ಅಕ್ಟೋಬರ್ 15ಕ್ಕೆ ಮಹಾ ರ್ಯಾಲಿ ಮಾಡಲಾಗುವುದು ಎಂದರು.