ವಿಜಯಪುರ: ಭಾರತದಲ್ಲಿ ಕೋಟ್ಯಂತರ ಜನರ ಬದುಕಾಗಿರುವ ಕೃಷಿಗೆ ಕೊರೊನಾ ಸೋಂಕು ಭಾರಿ ಆಘಾತವನ್ನು ಉಂಟು ಮಾಡಿದೆ. ರಸಗೊಬ್ಬರ, ಕಾಳು ಹೀಗೆ ಖರ್ಚಿನ ಬಾಬತ್ತುಗಳನ್ನು ಭರಿಸಿ ಬಿತ್ತಿದ ಬೆಳೆಗಳಿಗೆ ಯೋಗ್ಯ ಬೆಲೆ ಇಲ್ಲದೆ ಅನ್ನದಾತ ಸಾಲದ ಹೊರೆ ಅನುಭವಿಸುತ್ತಿದ್ದಾನೆ.
ತರಕಾರಿ ಬೆಳೆಗಳಿಗೆ ಬರೆ ಎಳೆದ ಕೊರೊನಾ: ರೈತರ ಬದುಕು ಬರ್ಬರ
ದೂರದ ಊರುಗಳಿಂದ ಎಪಿಎಂಸಿಗೆ ತರಕಾರಿ ತರುವ ರೈತರಿಗೆ ಬೆಲೆ ಕುಸಿತದ ಆಘಾತದ ಜೊತೆಗೆ ದಲ್ಲಾಳಿಗಳ ಕಾಟವು ಶುರುವಾಗಿದೆ ಎಂದು ವಿಜಯಪುರ ಜಿಲ್ಲೆಯ ರೈತರು ತಿಳಿಸಿದ್ದಾರೆ.
ತರಕಾರಿ ಬೆಳೆಗಳಿಗೆ ಬರೆ ಎಳೆದ ಕೊರೊನಾ
ಲಾಕ್ಡೌನ್ ಆದೇಶದಿಂದ ತರಕಾರಿ ಬೆಲೆ ನೆಲಕಚ್ಚಿದೆ. ಬಸವನ ಬಾಗೇವಾಡಿ, ಇಂಡಿ ಹಾಗೂ ಕೋಲಾರ ಸೇರಿದಂತೆ ವಿವಿಧ ಭಾಗಗಳಿಂದ ರೈತರು ಕಂಗಾಲಾಗಿದ್ದಾರೆ. ಈಗ ಲಾಭದ ನಿರೀಕ್ಷೆಯಂತೂ ಇಲ್ಲ, ಕನಿಷ್ಠ ಪಕ್ಷ ಖರ್ಚು ಮಾಡಿದ ಹಣವೂ ಬರದಾಗಿದೆ. ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ 10 ಕೆ.ಜಿ ಬದನೆಕಾಯಿಗೆ 150 ರೂಪಾಯಿಯನ್ನು ದಲ್ಲಾಳಿಗಳು ಕೇಳುತ್ತಿದ್ದಾರೆ ಎಂದು ರೈತರು ದೂರಿದರು.
ದೂರದ ಊರುಗಳಿಂದ ಬರುವ ರೈತರಿಗೆ ದಲ್ಲಾಳಿಗಳಿಂದ ಕಿರಿಕಿರಿ ಉಂಟಾಗಿದೆ. ಬೆಲೆ ಕುಸಿತದ ಮಧ್ಯೆ ಇವರ ಕಾಟವು ಇದೆ ಎಂದು ತರಕಾರಿ ಬೆಳೆದ ರೈತ ಸಿದ್ದಪ್ಪ ಬೇಸರ ವ್ಯಕ್ತಪಡಿಸಿದರು.