ವಿಜಯಪುರ:ನಗರದ ಬಿಎಲ್ಡಿಇ ಹೊಸ ಕ್ಯಾಂಪಸ್ನಲ್ಲಿ ನಡೆದ ಶ್ರೀ ಧರ್ಮಸ್ಥಳ ಗ್ರಾಮಾಣಾಭಿವೃದ್ಧಿ ಯೋಜನೆಯ ಟ್ರಸ್ಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ (Veerendra Heggade) ಕಾರ್ಯಕ್ರಮ ಮುಗಿದ ಮೇಲೆ ಐತಿಹಾಸಿಕ ಗೋಲಗುಮ್ಮಟ (Gol Gumbaz) ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು.
ಗೋಲಗುಮ್ಮಟ ವೀಕ್ಷಣೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ತಮ್ಮ ಪುತ್ರಿ ಶ್ರದ್ಧಾ ಹೆಗ್ಗಡೆ ಜತೆ ಶುಕ್ರವಾರ ಗೋಲಗುಮ್ಮಟ ವೀಕ್ಷಣೆಗೆ ತೆರಳಿದ ಅವರು, ಆದಿಲ್ ಶಾಹಿ ನಿರ್ಮಿಸಿದ ಸುಂದರ ಸ್ಮಾರಕ ಹಾಗೂ ವಿಸ್ಮಯ ವಾಸ್ತು-ಶಿಲ್ಪವನ್ನು ಕಂಡು ಮೂಕವಿಸ್ಮಿತರಾದರು.
ಗೋಲಗುಮ್ಮಟ ವೀಕ್ಷಣೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ಗೋಲಗುಮ್ಮಟದ 107 ಮೆಟ್ಟಿಲುಗಳನ್ನು ಯುವಕರನ್ನು ನಾಚಿಸುವಂತೆ ಸರಾಗವಾಗಿ ಏರಿದ ಧರ್ಮಾಧಿಕಾರಿಗಳು, ನಂತರ ಪಿಸುಮಾತಿನ ಗ್ಯಾಲರಿಗೆ ತೆರಳಿ ಸಂತಸ ಹಂಚಿಕೊಂಡರು. ಒಂದು ಬಾರಿ ಕೂಗಿದರೆ ಏಳು ಬಾರಿ ಪ್ರತಿಧ್ವನಿಸುವ ಪಿಸುಮಾತಿನ ಅದ್ಬುತವನ್ನು ಕಣ್ಣಾರೆ ಕಂಡು ಆಹ್ಲಾದಿಸಿದರು.
ಗೋಲಗುಮ್ಮಟ ವೀಕ್ಷಣೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ತಮ್ಮ ಮೊಬೈಲ್ನಿಂದ ಗುಮ್ಮಟದ ಮೇಲಿಂದ ವಿಜಯಪುರ ನಗರದ ವಿಸ್ತೀರ್ಣದ ಸುಂದರ ನೋಟದ ಫೋಟೋಗಳನ್ನು ಕ್ಲಿಕ್ಕಿಸಿದರು. ನಂತರ ತಾವು ಬಾಲ್ಯದಲ್ಲಿ ಗೋಳಗುಮ್ಮಟ ವೀಕ್ಷಿಸಲು ಆಗಮಿಸಿದ್ದ ಸವಿನೆನಪನ್ನು ಮತ್ತೊಮ್ಮೆ ಮೆಲುಕು ಹಾಕಿದರು.
ಕುಟುಂಬ ಸಮೇತರಾಗಿ ಗೋಲಗುಮ್ಮಟ ವೀಕ್ಷಣೆ:
ಕುಟುಂಬ ಸಮೇತರಾಗಿ ಗೋಲಗುಮ್ಮಟ ವೀಕ್ಷಣೆಗೆ ಆಗಮಿಸಿದ್ದ ಅವರಿಗೆ ಭದ್ರತೆ ನೀಡಲು ಮುಂದಾದಾಗ ಅದನ್ನು ನಯವಾಗಿಯೇ ತಿರಸ್ಕರಿಸಿದರು. ಭದ್ರತೆ ಸಲುವಾಗಿ ಪ್ರವಾಸಿಗರನ್ನು ಬೇರೆಡೆ ಸರಿಸುವುದನ್ನು ನೋಡಿದ ಧರ್ಮಾಧಿಕಾರಿಗಳು, ನನಗೆ ಯಾವುದೇ ವಿಶೇಷ ಆದ್ಯತೆ ನೀಡಬೇಡಿ, ನಾನು ಸಾಮಾನ್ಯ ಪ್ರವಾಸಿಗನಂತೆ ಬಂದಿದ್ದೇನೆ. ಉಳಿದವರು ಸಹ ದೂರದಿಂದ ಗುಮ್ಮಟ ವೀಕ್ಷಣೆಗೆ ಬಂದಿದ್ದಾರೆ. ಅವರಿಗೆ ತೊಂದರೆ ಕೊಡಬೇಡಿ ಎಂದು ಸಿಬ್ಬಂದಿಗೆ ವಿನಂತಿಸುವ ಮೂಲಕ ಸರಳತೆ ಮೆರೆದರು.
ಗೋಲಗುಮ್ಮಟ ವೀಕ್ಷಣೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆ ವಿಜಯಪುರದಲ್ಲಿ ಗೋಲಗುಮ್ಮಟ ಹೊರತಾಗಿ ನೂರಾರು ಸ್ಮಾರಕಗಳು ಇರುವುದನ್ನು ಸ್ಮರಿಸಿದರು. ಅವುಗಳ ವಿನ್ಯಾಸದ ಬಗ್ಗೆ ಸ್ಥಳೀಯ ಗೈಡ್ಗಳು ನೀಡಿದ ಮಾಹಿತಿ ಕೇಳಿ ಅಚ್ಚರಿಪಟ್ಟರು. ಇದೇ ವೇಳೆ ಸಾಕಷ್ಟು ಪ್ರವಾಸಿಗರು ಹೆಗ್ಗಡೆಯವರ ಜತೆ ಫೋಟೋ ಕ್ಲಿಕ್ಕಿಸಿಕೊಂಡು ಯೋಗಕ್ಷೇಮ ವಿಚಾರಿಸಿದರು.