ಕರ್ನಾಟಕ

karnataka

ETV Bharat / state

ಮರಾಠ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಪ್ರತಿಭಟನೆ - ವಿಜಯಪುರ ಪ್ರತಿಭಟನೆ ಸುದ್ದಿ

ಮರಾಠ ಸಮುದಾಯವನ್ನ 2ಎ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ವೀರ ಶಿವಾಜಿ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Veera Shivaji sena  activists protest
ಮರಾಠ ಸಮುದಾಯವನ್ನು 2ಎ ಗೆ ಸೇರಿಸುವಂತೆ ಆಗ್ರಹಿಸಿ ಪ್ರತಿಭಟನೆ

By

Published : Mar 11, 2020, 1:29 PM IST

ವಿಜಯಪುರ: ಮರಾಠ ಸಮುದಾಯವನ್ನ 2ಎ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ವೀರ ಶಿವಾಜಿ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಮರಾಠ ಸಮುದಾಯವನ್ನು 2ಎ ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಪ್ರತಿಭಟನೆ
ನಗರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವೀರ ಶಿವಾಜಿ ಸೇನೆ ಕಾರ್ಯಕರ್ತರು, ಸರ್ಕಾರ ಮರಾಠ ಸಮುದಾಯದ ಅಭಿವೃದ್ಧಿಗೆ ಯಾವುದೇ ಯೋಜನೆ ಜಾರಿ ಮಾಡಿಲ್ಲ.‌ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದ 24 ಗಂಟೆಯಲ್ಲಿ ಮರಾಠ ಸಮುದಾಯವನ್ನ 2ಎ ವರ್ಗಕ್ಕೆ‌ ಸೇರ್ಪಡೆ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದ್ರು.‌ ಆದ್ರೆ ಇದುವರೆಗೂ ಸಿಎಂ ನೀಡಿರೋ ಆಶ್ವಾಶನೆ ಮಾತ್ರ ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಪ್ರತಿಭಟನಾಕಾರರು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ರಾಜ್ಯ ಮರಾಠ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದೆ. ಆರ್ಥಿಕವಾಗಿ ಸಬಲವಾಗಿಸಲು ಸರ್ಕಾರ ಮರಾಠ ಸಮುದಾಯಕ್ಕೆ ಯೋಜನೆ ರೂಪಿಸಬೇಕು. ಪ್ರತಿ ಬಜೆಟ್‌ನಲ್ಲಿ ವಿಷೇಶ ಅನುದಾನ‌ ಮೀಸಿಲಿಡಬೇಕು ಹಾಗೂ ಸಮಾಜ ಅಭಿವೃದ್ಧಿಗೆ ನಿಗಮ/ಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ABOUT THE AUTHOR

...view details