ಕರ್ನಾಟಕ

karnataka

ETV Bharat / state

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ಪ್ರತಿಭಟನೆ: ವಾಟಾಳ್ ಪೊಲೀಸ್‌ ವಶಕ್ಕೆ

ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ವಾಟಾಳ್​ ನಾಗರಾಜ್​ ನೇತೃತ್ವದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಲು ಬರುತ್ತಿದ್ದ ವೇಳೆ ಪೊಲೀಸರು ವಾಟಾಳ್​ ಸೇರಿದಂತೆ ಹಲವು ಮಂದಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

Vatal Nagaraj
ವಾಟಾಳ್ ನಾಗರಾಜ್

By

Published : Dec 1, 2020, 2:25 PM IST

ವಿಜಯಪುರ:ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿನಗರದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಬೇಕಿತ್ತು. ಆದರೆ ಈ ಪ್ರತಿಭಟನೆಗೆ ಅವಕಾಶ ನೀಡದ ಜಿಲ್ಲಾ ಪೊಲೀಸರು, ವಾಟಾಳ್ ಸೇರಿದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 50ರ ಯಲಗೂರ ಕ್ರಾಸ್ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ವಾಟಾಳ್ ನಾಗರಾಜ್ ಅವರನ್ನು​ ಪೊಲೀಸರು ವಶಕ್ಕೆ ಪಡೆದರು.

ವಾಟಾಳ್ ನಾಗರಾಜ್, ಸಾ.ರಾ.ಗೋವಿಂದ್​ ಸೇರಿದಂತೆ ಹಲವು ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಪೊಲೀಸ್ ಬಂಧನ ವೇಳೆ ಹೋರಾಟಗಾರರು ಕಪ್ಪುಬಟ್ಟೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರದ್ದು ಗೂಂಡಾ ಸರ್ಕಾರ. ನಮಗೆ ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕಿತ್ತು. ಆದರೆ 60 ಕಿ.ಮೀ ದೂರದಲ್ಲೆ ಪೊಲೀಸರು ನಮ್ಮನ್ನು ತಡೆದಿದ್ದಾರೆ ಎಂದು ವಾಟಾಳ್ ಸಿಡಿಮಿಡಿಗೊಂಡರು.

ಇನ್ನೂ 15 ದಿನದಲ್ಲಿ ವಿಜಯಪುರಕ್ಕೆ ಬಂದು ಪ್ರತಿಭಟನೆ ನಡೆಸುವುದಾಗಿಯೂ ಅವರು ಇದೇ ವೇಳೆ ಎಚ್ಚರಿಸಿದರು. ಯತ್ನಾಳ್ ಬಗ್ಗೆ ಮಾತನಾಡುತ್ತಾ, ಆತ​ ನಾಯಿ ಇದ್ದಂತೆ. ಹೀಗೆ ಎಷ್ಟೋ ನಾಯಿಗಳು ಬೊಗಳುತ್ತಿರುತ್ತವೆ ಎಂದು ಅವರು ಕಿಡಿ ಕಾರಿದರು.

ABOUT THE AUTHOR

...view details