ಕರ್ನಾಟಕ

karnataka

ETV Bharat / state

ಬಿಎಲ್​ಡಿಇ ಆಸ್ಪತ್ರೆಗೆ ಔಷಧಿ ಪೂರೈಕೆಯಲ್ಲಿ ವ್ಯತ್ಯಯ: ಎಂ.ಬಿ.ಪಾಟೀಲ ಆಕ್ರೋಶ - Variation in proper medication delivery for a BL DE hospital

ನಾನು ಮುಖ್ಯಸ್ಥನಾಗಿರುವ ಬಿಎಲ್​ಡಿಇ ಆಸ್ಪತ್ರೆಯಲ್ಲಿ 500 (300 ಆಕ್ಸಿಜನ್) ಬೆಡ್​ಗಳಲ್ಲಿ ಸಾಮಾನ್ಯ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ನಮಗೆ ಸಾಕಷ್ಟು ಪ್ರಮಾಣದಲ್ಲಿ ತುರ್ತು ಔಷಧಿಗಳನ್ನು ಪೂರೈಸುತ್ತಿಲ್ಲ. ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

Variation in proper medication delivery for a BL DE hospital
ಬಿಎಲ್​ಡಿಇ ಆಸ್ಪತ್ರೆಗೆ ಸರಿಯಾದ ಔಷಧಿ ಪೂರೈಕೆಯಲ್ಲಿ ವ್ಯತ್ಯಯ

By

Published : May 9, 2021, 9:12 AM IST

ವಿಜಯಪುರ: ಕೊರೊನಾ ಸಂಕಷ್ಟದಲ್ಲಿ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದ ನಗರದ ಬಿಎಲ್​ಡಿಇ ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳು ಸರಿಯಾದ ಔಷಧಿ ದೊರೆಯದೇ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ.‌ ಸರ್ಕಾರದಿಂದ ಸೂಕ್ತ ಸಮಯಕ್ಕೆ ಔಷಧಿ ಸಿಗದೆ ಸಂದಿಗ್ಧ ಪರಿಸ್ಥಿತಿಯಲ್ಲಿ ರೋಗಿಗಳು ಇದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 300 ಆಕ್ಸಿಜನ್ ಬೆಡ್​ ಸೇರಿದಂತೆ ಒಟ್ಟು 500 ಬೆಡ್​ಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸರಕಾರದಿಂದ ಬಿಎಲ್​ಡಿಇ ಆಸ್ಪತ್ರೆಗೆ ತಾರತಮ್ಯ ಮಾಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆಗೆ ಸಹಕಾರ ನೀಡಲು ಸರಕಾರ ವಿಫಲವಾಗಿದೆ. ‌ಸರಕಾರ ನಿಗದಿ ಪಡಿಸಿದ್ದಕ್ಕಿಂತ ಕಡಿಮೆ ದರದಲ್ಲಿ ರೋಗಿಗಳಿಗೆ ಆಸ್ಪತ್ರೆ ಸೇವೆ ಸಲ್ಲಿಸುತ್ತಿದ್ದೇವೆ. ಆದರೆ ಸರಕಾರದಿಂದ ಸಹಕಾರದ ಕೊರತೆ ಕಾಣುತ್ತಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ನಮಗೆ ಜೀವಗಳ ಜೊತೆ ರಾಜಕೀಯ ಮಾಡಬೇಕಿಲ್ಲ. ನಾವು ಆಕ್ಸಿಜನ್ ಸಾಮರ್ಥ್ಯವನ್ನು ನಾಲ್ಕು ದಿನಗಳಲ್ಲಿ ದ್ವಿಗುಣ ಗೊಳಿಸುತ್ತಿದ್ದೇವೆ. ಕೊರೊನಾ ರೋಗಿಗಳಿಗೆ ಬೆಡ್ ಸಂಖ್ಯೆಯನ್ನು 700 ಕ್ಕೆ ಹೆಚ್ಚಿಸುತ್ತಿದ್ದೇವೆ. ಅದರಲ್ಲಿ 500 ಆಕ್ಸಿಜನ್ ಬೆಡ್​ಗಳಿವೆ. ಆದರೆ, ಬೆಡ್​ಗಳಿಗೆ ತಕ್ಕಂತೆ ಸೂಕ್ತ ಸಹಾಯ ಸಿಗುತ್ತಿಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಬೇಕಿದ್ದರೆ ನಮ್ಮ ಸೇವೆಯನ್ನು ಪರಿಶೀಲಿಸಿ, ನಾನು ಮುಖ್ಯಸ್ಥನಾಗಿರುವ ಬಿಎಲ್​ಡಿಇ ಆಸ್ಪತ್ರೆಯಲ್ಲಿ 500 (300 ಆಕ್ಸಿಜನ್) ಬೆಡ್​ಗಳಲ್ಲಿ ಸಾಮಾನ್ಯ ದರದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ನಮಗೆ ಸಾಕಷ್ಟು ಪ್ರಮಾಣದಲ್ಲಿ ತುರ್ತು ಔಷಧಿಗಳನ್ನು ಪೂರೈಸುತ್ತಿಲ್ಲ. ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಮೇ 3 ರಂದು 289 ರೆಮ್ಡಿಸಿವಿರ್ ಎಂಜೆಕ್ಷನ್ ನೀಡಲಾಗಿದೆ. ನಮಗೆ ಪ್ರತಿದಿನ ಕನಿಷ್ಟ 450 ರೆಮ್ಡಿಸಿವಿರ್ ಎಂಜೆಕ್ಷನ್ ಬೇಕು. ನಮ್ಮ ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 350 ರೋಗಿಗಳಿಗೆ ರೆಮ್ಡಿಸಿವಿರ್ ಎಂಜೆಕ್ಷನ್ ನೀಡಲೇಬೇಕು ಎಂದು ಹೇಳಿದ್ದಾರೆ.

ಸರಕಾರ ಈ ನಿಟ್ಟಿನಲ್ಲಿ ಮಾನವೀಯತೆಯ ದೃಷ್ಟಿಯಿಂದ ಗಮನ ಹರಿಸಬೇಕು. ಇದು ನಮ್ಮ ಒಂದು ಆಸ್ಪತ್ರೆಯ ಉದಾಹರಣೆ ಮಾತ್ರ. ಮುಂದೆ ಅನಾಹುತವಾಗುವುದನ್ನು ತಪ್ಪಿಸಲು ಸರಕಾರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.

ABOUT THE AUTHOR

...view details