ಕರ್ನಾಟಕ

karnataka

ETV Bharat / state

ವಸಂತ ಕಾಲ ಬಂದಾಗ ಕಾಗೆ, ಕೋಗಿಲೆ ಯಾವುದೆಂದು ಗೊತ್ತಾಗುತ್ತದೆ: ಯತ್ನಾಳ್‌ಗೆ ವಚನಾನಂದ ಶ್ರೀ ತಿರುಗೇಟು - ಹರಿಹರ ಪೀಠದ ವಚನಾನಂದ ಶ್ರೀ

ಬಿಜೆಪಿ ಶಾಸಕ‌ ಬಸನಗೌಡ ಪಾಟೀಲ್​ ಯತ್ನಾಳ್ ಮಾಡಿರುವ 10 ಕೋಟಿ ರೂ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಹರಿಹರ ಪೀಠದ ವಚನಾನಂದ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.

vachanananda shri
ವಚನಾನಂದ ಶ್ರೀ

By

Published : Dec 11, 2022, 12:46 PM IST

ಯತ್ನಾಳ್ ಹೇಳಿಕೆಗೆ ವಚನಾನಂದ ಶ್ರೀ ತಿರುಗೇಟು

ವಿಜಯಪುರ: 'ಬ್ರೋಕರ್ ಸ್ವಾಮಿ' ಎಂಬ ಬಿಜೆಪಿ ಶಾಸಕ‌ ಬಸನಗೌಡ ಪಾಟೀಲ್​ ಯತ್ನಾಳ್ ಹೇಳಿಕೆಗೆ ಹರಿಹರ ಪೀಠದ ವಚನಾನಂದ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ. ವಸಂತ ಕಾಲ ಬರಲಿ, ವಸಂತ ಬಂದಾಗಲೇ ಕಾಗೆ ಯಾವುದು ಕೋಗಿಲೆ ಯಾವುದು ಗೊತ್ತಾಗುವುದು ಎಂದು ಪರೋಕ್ಷವಾಗಿ ಯತ್ನಾಳ್​ ಅವರನ್ನು ಕಾಗೆ ಎಂದು ಟೀಕಿಸಿದರು.

'ಹರಿಹರ ಪೀಠದ ಸ್ವಾಮೀಜಿ ಬ್ರೋಕರ್ ಸ್ವಾಮಿ ಆಗಿದ್ದಾರೆ. ಹಣ ವಸೂಲಿ ಮಾಡೋದು, ಮಂತ್ರಿ ಮಾಡಿ ಎಂದು ಹಣ ಕೇಳೋ ಕೆಲಸ ಮಾಡುತ್ತಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರಿಂದ ಹರಿಹರ ಶ್ರೀಗಳು 10 ಕೋಟಿ ರೂ. ಹಣ ವಸೂಲಿ ಮಾಡಿದ್ದಾರೆ. ಮಠದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡುತ್ತೇವೆ ಎಂದು ಹಣ ಪಡೆದಿದ್ದಾರೆ‌. ಮಠದಲ್ಲಿ ಹಣದ ವಿಚಾರದಲ್ಲಿ ಬಹಳ ಅವ್ಯವಹಾರ ಮಾಡಿದ್ದಾರೆ. ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಅವ್ಯವಹಾರದ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು' ಎಂದು ಯತ್ನಾಳ್​ ಆರೋಪಿಸಿದ್ದರು.

ಇದನ್ನೂ ಓದಿ:ಜೋಕರ್​ಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು: ಶಾಸಕ‌ ಯತ್ನಾಳ್​ಗೆ ವಚನಾನಂದ ಶ್ರೀ ಪರೋಕ್ಷ ಟಾಂಗ್​

'2020 ರಲ್ಲಿ ನಡೆದ ಹರ ಜಾತ್ರೆಗೂ ಮುನ್ನ ಬಸವರಾಜ ಬೊಮ್ಮಾಯಿ ಅಡಿಗಲ್ಲು ಸ್ಥಾಪಿಸಿದ್ದರು. ಬಳಿಕ ಸಿಎಂ ಬೊಮ್ಮಾಯಿ ಸರ್ಕಾರ ನಮ್ಮ ಮತ್ತು ಕನಕದಾಸ ಪೀಠಕ್ಕೆ ತಲಾ ಹತ್ತು ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿದೆ. ಆಗಿನ್ನೂ ಪಂಚಮಸಾಲಿ ಸಮಾಜದ ಪಾದಯಾತ್ರೆ ನಡೆದಿರಲಿಲ್ಲ, ಅದಕ್ಕೂ ಮೊದಲೇ ಮಠದ ಅಭಿವೃದ್ಧಿಗೆ, ವಿದ್ಯಾರ್ಥಿ ನಿಲಯಕ್ಕೆ ಅನುದಾನ ನೀಡಿದ್ದಾರೆ ಎಂದರು.

ಇದನ್ನೂ ಓದಿ:ಬೆಳಗಾವಿ ಅಧಿವೇಶನದಲ್ಲಿ ವಚನಾನಂದ ಶ್ರೀಗಳ ಅವ್ಯವಹಾರ ಬಯಲಿಗೆಳೆಯುವೆ: ಶಾಸಕ‌ ಬಸನಗೌಡ ಪಾಟೀಲ ಯತ್ನಾಳ್​

ಸರ್ಕಾರ ಒಮ್ಮೆಲೆ ಹಣ ನೀಡುವುದಿಲ್ಲ, ಕ್ರಿಯಾ ಯೋಜನೆ ಸಿದ್ಧಪಡಿಸಿ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡಿದೆ. ಇದೆಲ್ಲಾ ಪಾರದರ್ಶಕವಾಗಿದೆ. ಬೇಕಾದರೆ ಆರ್​ಟಿಐ ಅಡಿ ಮಾಹಿತಿ ಪಡೆಯಬಹುದು. ದಾಖಲೆ ಬಿಡುಗಡೆಗೊಳಿಸುವವರು ಬಿಡುಗಡೆ ಮಾಡಲಿ ಎಂದು ಯತ್ನಾಳ್​ಗೆ ಸವಾಲು ಹಾಕಿದರು.

ABOUT THE AUTHOR

...view details