ಕರ್ನಾಟಕ

karnataka

ETV Bharat / state

ಸ್ಥಳೀಯ ಸಂಸ್ಥೆಗಳ ಚುನಾವಣೆ : ವಿಜಯಪುರ, ಧಾರವಾಡದಲ್ಲಿ ಶಾಂತಿಯುತ ಮತದಾನ - ಸ್ಥಳೀಯ ಸಂಸ್ಥೆಗಳ ಚುನಾವಣೆ

ವಿಜಯಪುರದ ಆರು ಪಟ್ಟಣ ಪಂಚಾಯತ್‌ಗಳ 97 ವಾರ್ಡ್​ಗಳಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದೆ. 11 ಗಂಟೆಯವರೆಗೆ ಶೇ. 31.46 ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ..

Urban local body election
ಸ್ಥಳೀಯ ಸಂಸ್ಥೆಗಳ ಚುನಾವಣೆ

By

Published : Dec 27, 2021, 12:49 PM IST

ವಿಜಯಪುರ :ಜಿಲ್ಲೆಯ ಆರು ಪಟ್ಟಣ ಪಂಚಾಯತ್‌ನ 97 ವಾರ್ಡ್​ಗಳಿಗೆ ಇಂದು ಬೆಳಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿದೆ. 11 ಗಂಟೆಯವರೆಗೆ ಶೇ.31.46ರಷ್ಟು ಮತದಾನವಾಗಿದೆ.

ಜಿಲ್ಲೆಯ ನಿಡಗುಂದಿಯ 16, ದೇವರಹಿಪ್ಪರಗಿಯ 17, ಆಲಮೇಲದ 19, ಮನಗೂಳಿಯ 16, ಕೊಲ್ಹಾರದ 17 ಹಾಗೂ ನಾಲತವಾಡದ 14 ವಾರ್ಡ್​ಗಳಿಗೆ ಮತದಾನ ನಡೆಯಲಿದೆ. ಅದರಲ್ಲಿ 2 ವಾರ್ಡ್​ಗಲ್ಲಿ ಅವಿರೋಧ ಆಯ್ಕೆ ಮಾಡಲಾಗಿದೆ. ಹೀಗಾಗಿ, 99 ವಾರ್ಡ್​ಗಳ ಪೈಕಿ 97 ವಾರ್ಡ್​ಗಳಿಗೆ ಮತದಾನ ನಡೆಯುತ್ತಿದೆ.

ಮತದಾರರ ವಿವರ:

  • 260- ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು
  • 37,392- ಪುರುಷರು
  • 7,068- ಮಹಿಳೆಯರು
  • 8 ಇತರೆ ಮತದಾರರು ಸೇರಿ 74,587 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 98 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.

ಕಾಂಗ್ರೆಸ್ ಕಾರ್ಯಕರ್ತರ ಆಕ್ಷೇಪ :ಇಂದು ಬೆಳಗ್ಗೆ ಆರಂಭವಾದ ಮತದಾನ ವೇಳೆ ಕೊಲ್ಹಾರ ಪಟ್ಟಣ ಪಂಚಾಯತ್‌ ಮತದಾನ ವೇಳೆ ಎಐಎಂಐಎಂ ಪಕ್ಷದ ಧ್ವಜ ಕಂಡು ಬಂದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಚುನಾವಣಾ ಸಿಬ್ಬಂದಿ ಧ್ವಜ ತೆರವುಗೊಳಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಅಭ್ಯರ್ಥಿ ಬೆಂಬಲಿಗರ ನಡುವೆ ಮಾರಾಮಾರಿ :ಆಲಮೇಲ ಪಟ್ಟಣ ಪಂಚಾಯತ್‌ ಮತದಾನ ವೇಳೆ ಕಾಂಗ್ರೆಸ್ ಹಾಗೂ ಪಕ್ಷೇತರ ಅಭ್ಯರ್ಥಿ ಬೆಂಬಲಿಗರ ನಡುವೆ ಮಾರಾಮಾರಿ ನಡೆದಿದೆ. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಗ ಗಾಯಗೊಂಡಿದ್ದು, ಸಿಂದಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲತವಾಡದಲ್ಲಿ ಶಾಂತಿಯುತ ಮತದಾನ :ನಾಲತವಾಡ ಪಟ್ಟಣ ಪಂಚಾಯತ್‌ನಲ್ಲಿ ಶಾಂತಿಯುತವಾಗಿ ಮತದಾನ ನಡೆದಿದೆ. ವೃದ್ಧೆಯನ್ನು ವ್ಯಕ್ತಿಯೊಬ್ಬ ಹೆಗಲ ಮೇಲೆ ಹೊತ್ತುಕೊಂಡು ಮತಗಟ್ಟೆಗೆ ತಂದು ಹಕ್ಕು ಚಲಾಯಿಸಲು ಸಹಾಯ ಮಾಡಿದರು. ಇದೇ ಕ್ಷೇತ್ರದಲ್ಲಿ 90 ವರ್ಷದ ನಾಗಮ್ಮ ಇಂಗಳಗಿ ವೃದ್ಧೆ ತಮ್ಮ ಹಕ್ಕು ಚಲಾಯಿಸಿದರು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರೂ ಮತದಾನ ಚಲಾಯಿಸುವ ಮೂಲಕ ಜಾಗೃತಿ ಮೂಡಿಸಿದರು.

6 ಗ್ರಾಪಂಗಳ 76 ಸ್ಥಾನಗಳಿಗೆ ಮತದಾನ :ಧಾರವಾಡ ಜಿಲ್ಲೆಯಲ್ಲಿ ಅವಧಿ ಮುಕ್ತಾಯಗೊಂಡಿರುವ ಒಟ್ಟು 6 ಗ್ರಾಪಂಗಳ 76 ಸ್ಥಾನಗಳಿಗೆ ಹಾಗೂ ವಿವಿಧ ಕಾರಣಗಳಿಂದ ಖಾಲಿ ಉಳಿಸಿರುವ ಒಟ್ಟು 7 ಸ್ಥಾನಗಳಿಗೆ ಹಾಗೂ ಅಣ್ಣಿಗೇರಿ ಪುರಸಭೆಯ ಒಟ್ಟು 23 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ.

ಬೆಳಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ. ಧಾರವಾಡ ತಾಲೂಕಿನ 8 ಮತಗಟ್ಟೆಗಳು, ಕಲಘಟಗಿ ತಾಲೂಕಿನ 6 , ನವಲಗುಂದ 3, ಅಣ್ಣಿಗೇರಿ ತಾಲೂಕಿನ 6 ಹಾಗೂ ಕುಂದಗೋಳ ತಾಲೂಕಿನ 9 ಮತಗಟ್ಟೆಗಳು ಸೇರಿ ಒಟ್ಟು 32 ಮತಗಟ್ಟೆಗಳಲ್ಲಿ 15,088 ಪುರುಷರು ಹಾಗೂ 13,989 ಮಹಿಳೆಯರು ಸೇರಿ ಒಟ್ಟು 29,091 ಮತದಾರರಿದ್ದಾರೆ.

ಗ್ರಾಮ ಪಂಚಾಯತ್‌ ಚುನಾವಣೆಗೆ ಒಟ್ಟು 140 ಮತಗಟ್ಟೆ ಸಿಬ್ಬಂದಿ ನೇಮಿಸಲಾಗಿದೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿಯ ಒಟ್ಟು 23 ವಾರ್ಡಗಳಿಗೆ 23 ಮತಗಟ್ಟೆಗಳಲ್ಲಿ, 10,677 ಪುರುಷರು, 10,882 ಮಹಿಳೆಯರು ಹಾಗೂ 2 ಇತರೆ ಸೇರಿ ಒಟ್ಟು 21,561 ಮತದಾರರಿದ್ದಾರೆ. ಪುರಸಭೆ ಚುನಾವಣೆಗೆ ಒಟ್ಟು 104 ಮತಗಟ್ಟೆ ಸಿಬ್ಬಂದಿಯನ್ನು ನೇಮಿಸಲಾಗಿದೆ.

ಇದನ್ನೂ ಓದಿ:ಪರಿಷತ್ ಕದನದ ಬಳಿಕ ಲೋಕಲ್​​ ದಂಗಲ್: ಬೆಳಗಾವಿಯಲ್ಲಿ ಬಿರುಸಿನ ಮತದಾನ

ABOUT THE AUTHOR

...view details