ವಿಜಯಪುರ: ಭಾರತೀಯ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ವಿಜಯಪುರದ ಬಿಎಸ್ಎನ್ಎಲ್ ನಿವೃತ್ತ ನೌಕರನ ಮಗಳು ಸತತ ಎರಡನೇ ಬಾರಿಗೆ ಉತ್ತಮ ರ‍್ಯಾಂಕ್ ಗಳಿಸಿ ತೇರ್ಗಡೆ ಹೊಂದಿದ್ದು, ಗುಮ್ಮಟನಗರಿಗೆ ಮತ್ತೊಂದು ಗರಿ ಮೂಡಿದೆ.
ಇತ್ತೀಚಿಗೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳಿಸಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದರು. ಈಗ ಯುಪಿಎಸ್ಸಿ ಪರೀಕ್ಷೆಯಲ್ಲಿ ಮತ್ತೊಮ್ಮೆ ಟಾಪ್ ಸ್ಥಾನ ಬಂದಿರುವುದು ಹೆಮ್ಮೆ ತಂದಿದೆ.
ವಿಜಯಪುರದ ಸಂಸ್ಕೃತಿ ಲೇಔಟ್ ನಿವಾಸಿ ಬಿಎಸ್ಎನ್ಎಲ್ ನಿವೃತ್ತ ನೌಕರ ಸಿದ್ದಪ್ಪ ಗೋಟ್ಯಾಳ ಎರಡನೇ ಪುತ್ರಿ ಸವಿತಾ ಗೋಟ್ಯಾಳ ಯುಪಿಎಸ್ಸಿ ಪರೀಕ್ಷೆಯಲ್ಲಿ 479 ನೇ ಸ್ಥಾನ ಗಳಿಸಿದ್ದಾರೆ. ಸದ್ಯ ದೆಹಲಿಯಲ್ಲಿ ವಾಸಿಸುತ್ತಿರುವ ಸವಿತಾ, ಕಳೆದ ವರ್ಷ 2020 ರಲ್ಲಿ 626 ಸ್ಥಾನ ಪಡೆದಿದ್ದರು. ಇಷ್ಟಕ್ಕೆ ತೃಪ್ತಿಯಾಗದೇ 2021ರಲ್ಲಿ ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಗೆ ಕುಳಿತು ಉತ್ತಮ ಅಂಕ ಪಡೆದಿದ್ದಾರೆ.
UPSC Results-2021... 2ನೇ ಬಾರಿಯೂ ಉತ್ತಮ ರ‍್ಯಾಂಕ್; ಗೊಮ್ಮಟನಗರಿ ಗೌರವ ಹೆಚ್ಚಿಸಿದ ಸವಿತಾ! ಇವರ ಹಿರಿಯ ಸಹೋದರಿ ಸಹ 2016ನೇ ಬ್ಯಾಚ್ನಲ್ಲಿ ಉತ್ತಮ ರ‍್ಯಾಂಕ್ ಗಳಿಸಿ ಐಪಿಎಸ್ ಅಧಿಕಾರಿಯಾಗಿ ಪಂಜಾಬ್ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಕಿರಿಯ ಸಹೋದರ ಸಹ ಯುಪಿಎಸ್ಸಿ ಕೋಚಿಂಗ್ ಪಡೆಯುತ್ತಿದ್ದಾನೆ. ಮೂವರೂ ಇಂಜಿನೀಯರ್ ಪದವೀಧರರು. ಸದ್ಯ ಸವಿತಾ ಗೋಟ್ಯಾಳ ದೆಹಲಿಯಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಪೋಷಕರು ಸಂತಸ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:UPSC Results-2021: ಮೈಸೂರಿನ ದೃಷ್ಟಿ ವಿಶೇಷ ಚೇತನೆಯ ಸಾಧನೆಗೆ ಸಲಾಂ