ವಿಜಯಪುರ:ಯುಪಿಎಸ್ಸಿ ಪರೀಕ್ಷೆಯಲ್ಲಿ ವಿಜಯಪುರದ ಯುವತಿ ಸವಿತಾ ಗೋಟ್ಯಾಳ ಸಾಧನೆ ಮಾಡಿದ್ದಾರೆ. ದೇಶಕ್ಕೆ 626ನೇ ರ‍್ಯಾಂಕ್ ಪಡೆದು ತಮ್ಮ ಸಹೋದರಿಯ ಹಾದಿಯಲ್ಲಿ ಮುನ್ನಡೆಯುತ್ತಿದ್ದಾರೆ.
ಅಕ್ಕನ ಹಾದಿಯಲ್ಲಿ ತಂಗಿ: ಯುಪಿಎಸ್ಸಿ ಫಲಿತಾಂಶದಲ್ಲಿ ವಿಜಯಪುರಕ್ಕೆ ಕೀರ್ತಿ ತಂದ ಯುವತಿ - ಅಶ್ವಿನಿ ಗೋಟ್ಯಾಳ
ಯುಪಿಎಸ್ಸಿಯ ನಾಗರಿಕ ಸೇವಾ ಪರೀಕ್ಷೆಗಳ ಫಲಿತಾಂಶ ಹೊರಬಿದ್ದಿದ್ದು, ವಿಜಯಪುರದ ಯುವತಿ ದೇಶಕ್ಕೆ 626ನೇ ರ‍್ಯಾಂಕ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಸವಿತಾ ಗೋಟ್ಯಾಳ
ಇವರ ಸಹೋದರಿ ಅಶ್ವಿನಿ ಗೋಟ್ಯಾಳ ಯುಪಿಎಸ್ಸಿಯಲ್ಲಿ ಸಾಧನೆ ಮಾಡಿ ಪಂಜಾಬಿನ ಲುದಿಯಾನಾದಲ್ಲಿ ಐಪಿಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ತಂದೆ ಸಿದ್ದಪ್ಪ ಗೋಟ್ಯಾಳ ಬಿಎಸ್ಎನ್ಎಲ್ನಲ್ಲಿ ನೌಕರರಾಗಿದ್ದರು.
ಹಿರಿಯ ಮಗಳು ಐಪಿಎಸ್ ಅಧಿಕಾರಿಯಾಗುತ್ತಿದ್ದಂತೆ ಸ್ವಯಂ ನಿವೃತ್ತಿ ಪಡೆದಿರುವ ಸಿದ್ದಪ್ಪ ಗೋಟ್ಯಾಳ ಮಕ್ಕಳ ವಿದ್ಯಾಭ್ಯಾಸಕ್ಕೆ ಬೆನ್ನಲುಬಾಗಿ ನಿಂತಿದ್ದಾರೆ. ಗೋಟ್ಯಾಳ ಕುಟುಂಬದಲ್ಲಿ ಸಹೋದರಿಯರ ಸಾಧನೆ ಕಂಡು ವಿಜಯಪುರ ಜಿಲ್ಲೆಯ ಜನರಿಗೆ ಹೆಮ್ಮೆ ತಂದಿದೆ.
Last Updated : Aug 4, 2020, 5:27 PM IST