ವಿಜಯಪುರ:ನರೇಂದ್ರ ಮೋದಿಯವರ ಫೋಟೋ ಮೇಲೆ ಆರಿಸಿ ಬಂದವರಿಗೆ ಕಷ್ಟವೂ ಗೊತ್ತಿಲ್ಲ. ಅವರು ಯಾವ ಹಳ್ಳಿಗೂ ಹೋಗಿಲ್ಲ. ತಲೆ ಇಲ್ಲದವರು ಚುನಾವಣೆಯಲ್ಲಿ ಚುನಾಯಿತರಾಗಿದ್ದಾರೆ. ನಾವೇನು ಮಾಡೋದು ಎಂದುಸಂಸದ ರಮೇಶ ಜಿಗಜಿಣಗಿಗೆವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ್ ತಿರುಗೇಟು ನೀಡಿದ್ದಾರೆ.
ಮೋದಿ ಫೋಟೋ ಮೇಲೆ ಆರಿಸಿ ಬಂದವರಿಗೆ ಕಷ್ಟ ಗೊತ್ತಿಲ್ಲ, ತಲೆ ಇಲ್ಲದವರು ಚುನಾಯಿತರಾಗಿದ್ದಾರೆ: ಯತ್ನಾಳ್ ವಾಗ್ದಾಳಿ - BJP MP Ramesh Jigajinagi Slams Basanagouda Patil Yatnal
ಯತ್ನಾಳ ತಲೆ ಇಲ್ಲದೆ ಮಾತಾಡ್ತಾರೆ ಎಂದು ರಮೇಶ ಜಿಗಜಿಣಗಿ ಹೇಳಿಕೆಗೆ ತಿರುಗೇಟು ನೀಡಿದ ಬಸನಗೌಡ ಯತ್ನಾಳ್, ತಲೆ ಇಲ್ಲದವರನ್ನೆಲ್ಲಾ ಜನ ಸಂಸತ್‌ಗೆ ಆರಿಸಿ ಕಳಿಸಿದ್ದಾರೆ ಎಂದು ಟಾಂಗ್ ನೀಡಿದ್ದಾರೆ.
ಯತ್ನಾಳ್ ತಲೆ ಇಲ್ಲದೆ ಮಾತಾಡ್ತಾರೆ ಎಂದು ಸಂಸದ ರಮೇಶ ಜಿಗಜಿಣಗಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ರಮೇಶ ಜಿಗಜಿಣಗಿ ಅವರಿಂದ ನಾನು ಪಾಠ ಕಲಿಯಬೇಕಿಲ್ಲ. ಮೊನ್ನೆ ಆಲಮಟ್ಟಿಯಲ್ಲಿ ಸಿಎಂ ಜೊತೆ ಪ್ರವಾಹ ಸಂತ್ರಸ್ತರ ಬಗ್ಗೆ ಮಾತನಾಡುವ ಬದಲು ಕೇವಲ ದಲಿತರ ಪರ ಮಾತನಾಡಿದ್ದಾರೆ. ಇವರಿಗೆ ದಲಿತರು ಅಷ್ಟೇ ಮತ ಹಾಕಿಲ್ಲ, ನೀವು ದಲಿತರಿಗಷ್ಟೇ ಸೀಮಿತವಾಗಿ ಸಂಸದರಾಗಿದ್ದೀರೋ ಅಥವಾ ಲೋಕಸಭೆ ಕ್ಷೇತ್ರದ ಎಲ್ಲರಿಗೂ ಸಂಸದರಾಗಿದ್ದೀರೋ ? ಎಂಬುದನ್ನು ಪ್ರಶ್ನೆ ಮಾಡಬೇಕಾಗುತ್ತದೆ ಎಂದರು.
ನನಗೆ ದಲಿತರು, ಹಿಂದುಳಿದವರು, ಮೇಲ್ವರ್ಗದವರು ಸೇರಿದಂತೆ ಎಲ್ಲರೂ ವೋಟ್ ಹಾಕಿದ್ದಾರೆ. ಒಂದೇ ವರ್ಗದವರ ಪರವಾಗಿ ಮಾತನಾಡುವುದು ಸಮಂಜಸವಲ್ಲ. ನಿಮ್ಮಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಶಾಸಕ ಯತ್ನಾಳ್, ಸಂಸದ ರಮೇಶ ಜಿಗಜಿಣಗಿಗೆ ಟಾಂಗ್ ಕೊಟ್ಟಿದ್ದಾರೆ.