ಕರ್ನಾಟಕ

karnataka

ETV Bharat / state

ವಿಜಯಪುರ: ಸಿರಿ ಧಾನ್ಯಗಳಿಂದ‌ ತಯಾರಿಸಿದ ಸ್ವಾಮಿ ವಿವೇಕಾನಂದರ ಮೂರ್ತಿ ಅನಾವರಣ - vijayanagara latest news

ಸ್ವಾಮಿ ವಿವೇಕಾನಂದ ಜಯಂತಿಯನ್ನು ಆಯೋಜಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ‌ಸ್ವಾಮಿ ವಿವೇಕಾನಂದ‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಿರಿ ಧಾನ್ಯಗಳಿಂದ‌ ತಯಾರಿಸಿದ ಸ್ವಾಮಿ ವಿವೇಕಾನಂದರ ಮೂರ್ತಿ ಅನಾವರಣಗೊಳಿಸಿದರು.‌

Unveiling of the statue of Swami Vivekananda made from Siri grains
ವಿಜಯಪುರ: ಸಿರಿ ಧಾನ್ಯಗಳಿಂದ‌ ತಯಾರಿಸಿದ ಸ್ವಾಮಿ ವಿವೇಕಾನಂದರ ಮೂರ್ತಿ ಅನಾವರಣ

By

Published : Jan 12, 2020, 1:52 PM IST

ವಿಜಯಪುರ: ಸ್ವಾಮಿ ವಿವೇಕಾನಂದ ಜಯಂತಿಯನ್ನು ನಗರದ ಕಂದಗಲ್ ಹನುಮಂತರಾಯ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ ಪಾಟೀಲ ‌ಸ್ವಾಮಿ ವಿವೇಕಾನಂದ‌ರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಿರಿ ಧಾನ್ಯಗಳಿಂದ‌ ತಯಾರಿಸಿದ ಸ್ವಾಮಿ ವಿವೇಕಾನಂದರ ಮೂರ್ತಿ ಅನಾವರಣಗೊಳಿಸಿದರು.‌

ಸ್ವಾಮಿ ವಿವೇಕಾನಂದ ಜಯಂತಿ ಅಂಗವಾಗಿ ನಗರದ ಸಿದ್ದೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತದ ಮಾರ್ಗವಾಗಿ ಕಂದಗಲ್ ಹನುಮಂತರಾಯ ರಂಗ ಮಂದಿರದೆಡೆಗೆ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಘೋಷಣೆ ಕೂಗುತ್ತಾ ಜಾಥಾ ನಡೆಸಿದರು.

ವಿಜಯಪುರ: ಸಿರಿ ಧಾನ್ಯಗಳಿಂದ‌ ತಯಾರಿಸಿದ ಸ್ವಾಮಿ ವಿವೇಕಾನಂದರ ಮೂರ್ತಿ ಅನಾವರಣ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಸಿ.ಸಿ. ಪಾಟೀಲ, ವಿವೇಕಾನಂದರ ಜಯಂತಿ‌ ಆಚರಿಸಲು ಹಾಗೂ ಪೊಲೀಸ್‌ ಓಬ್ಬವ್ವ ಪಡೆಗೆ ಚಾಲನೆ ನೀಡಲು ವಿಜಯಪುರಕ್ಕೆ ಆಗಮಿಸಿರುವುದಾಗಿ ತಿಳಿಸಿದರು.

ಇನ್ನೂ ಸಚಿವ ಸಂಪುಟ ವಿಸ್ತರಿಸುವ ಕುರಿತು ಪ್ರತಿಕ್ರಿಯಿಸಿ, ಎಲ್ಲದಕ್ಕೂ ಪಕ್ಷದ ರಾಜಾಧ್ಯಕ್ಷರು ಇವತ್ತು ವಿಜಯಪುರಕ್ಕೆ ಬರಲಿದ್ದು ಅದರ ಕುರಿತು ಅವ್ರು ಮಾತನಾಡುತ್ತಾರೆ.‌ ಇನ್ನೂ ಸಚಿವ ಸ್ಥಾನಕ್ಕೆ ಯಾರನ್ನ ತಗೋಬೇಕು ಅಥವಾ ಯಾರನ್ನ ಬಿಡಬೇಕು ಅನ್ನೋದನ್ನ ಸಿಎಂ ಅವ್ರು ನಿರ್ಧರಿಸುತ್ತಾರೆ. ಸಿದ್ದೇಶ್ವರ ಜಾತ್ರೆಗೆ 17 ರಂದು ಸಿಎಂ ಬರ್ತಿದ್ದು ವಿಜಯಪುರದಲ್ಲಿ‌‌‌ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ‌ ಎಂದರು‌.

ವಿಜಯಪುರ ಲಿಂಗಾಯತ ಶಾಸಕರಿಗೆ ಮಂತಿಗಿರಿ ವಿಚಾರವಾಗಿ ಮಾತನಾಡಿ, ಸಚಿವ ಸ್ಥಾನ ಪುನರ್ ರಚನೆ ಮಾಡುವುದು ವಿಸ್ತರಣೆ ಮಾಡುವುದು ಎಲ್ಲವೂ ಮುಖ್ಯಮಂತ್ರಿಗಳ ಪರಮಾಧಿಕಾರ. ಮಂತ್ರಿ ಆಗಬೇಕು ಅನ್ನುವ ಆಸೆ ಎಲ್ಲಾ ಶಾಸಕರಿಗೂ ಇರುತ್ತೆ ಆದ್ರೆ ಎಲ್ಲವನ್ನು ಮುಖ್ಯಮಂತ್ರಿಗಳು ನಿರ್ಧಾರ ಮಾಡುತ್ತಾರೆಂದರು.

ಇನ್ನೂ ನೀವು ವಿಜಯಪುರಕ್ಕೆ ಅತಿಥಿ ಉಸ್ತುವಾರಿ ಸಚಿವರಾಗಿದ್ರಿ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವ, ನಿರಂತರವಾಗಿ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿ‌ದ್ದೇನೆ. ಉಪ ಚುನಾವಣಾ ಜವಬ್ದಾರಿ ನಿಭಾಯಿಸಬೇಕಿತ್ತು ಹೀಗಾಗಿ ನಾನು ಆ‌ ಕಾರ್ಯದಲ್ಲಿ ತೊಡಗಿದ್ದೆ ಎಂದು ಸ್ಪಷ್ಟನೆ ನೀಡಿದ್ರು.

ABOUT THE AUTHOR

...view details