ವಿಜಯಪುರ:ಅಪರಿಚಿತ ಯುವಕನೊಬ್ಬನ ಮೃತ ದೇಹ ನಗರದ ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ಕಂದಕದಲ್ಲಿ ಪತ್ತೆಯಾಗಿದೆ.
ಡಿಸಿ ನಿವಾಸದ ಮುಂಭಾಗದ ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ...ಸಾವಿನ ಸುತ್ತ ನಾನಾ ಶಂಕೆ - ವಿಜಯಪುರ ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆ
ಪರಿಚಿತ ಯುವಕನೊಬ್ಬನ ಮೃತ ದೇಹ ವಿಜಯಪುರ ನಗರದ ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ಕಂದಕದಲ್ಲಿ ಪತ್ತೆಯಾಗಿದೆ.

ಜಿಲ್ಲಾಧಿಕಾರಿ ನಿವಾಸದ ಮುಂಭಾಗದ ಕಂದಕದಲ್ಲಿ ಅಪರಿಚಿತ ವ್ಯಕ್ತಿ ಶವ ಪತ್ತೆಯಾಗಿದೆ. ಕಂದಕದಲ್ಲಿ ಸುಮಾರು 25 ವರ್ಷ ಮೇಲ್ಪಟ್ಟ ವ್ಯಕ್ತಿ ಶವ ತೇಲುತ್ತಿದ್ದದ್ದನ್ನ ಕಂಡ ಸಾರ್ವಜನಿಕರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಗೋಲ್ ಗುಂಬಜ್ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವವ ಮೇಲಕ್ಕೆ ತೆಗೆದಿದ್ದಾರೆ.
ಇನ್ನು ಮೃತಪಟ್ಟ ವ್ಯಕ್ತಿ ಯಾರು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆಯ ತಪ್ಪಿ ಸಾವನ್ನಪ್ಪಿದ್ದಾನೋ ಅಥವಾ ಯಾರಾದರೂ ಆತನನ್ನು ಕಂದಕಕ್ಕೆ ತಳ್ಳಿದ್ದಾರೋ ಎಂಬ ಶಂಕೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ಯವಾಗುತ್ತಿದ್ದು. ಸೂಕ್ತ ತನಿಖೆಯಿಂದ ಆತ ಯಾರು ಎಂಬುದು ತಿಳಿದು ಬರಬೇಕಿದೆ.