ವಿಜಯಪುರ: ರಾಜ್ಯದ ಎರಡನೇ ಇಂಡಿಯನ್ ರಿಸರ್ವ್ ಬಟಾಲಿಯನ್ (ಐಆರ್ಬಿ) ನೂತನ ಆಡಳಿತ ಕಚೇರಿಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಾಳೆ ವರ್ಚುಯಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ನಗರದ ಹೊರವಲಯದ ಅರಕೇರಿ ಗ್ರಾಮದ 100 ಎಕರೆ ಪ್ರದೇಶದಲ್ಲಿ 9.62 ಕೋಟಿ ರೂ.ದಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಲಾಗಿದೆ. ಐಆರ್ಬಿ ಮುಖ್ಯಸ್ಥರಿಂದ ಹಿಡಿದು ಕಮಾಂಡರ್, ಇನ್ಸೆಪೆಕ್ಟರ್ವರೆಗೆ ಪ್ರತ್ಯೇಕ ಹವಾ ನಿಯಂತ್ರಿತ ಕೊಠಡಿಗಳನ್ನು ನಿರ್ಮಿಸಲಾಗಿದೆ.
ರಾಜ್ಯದ ಎರಡನೇ ಐಆರ್ಬಿ ಕಟ್ಟಡ ಉದ್ಘಾಟನೆ ಮಾಡಲಿರುವ ಕೇಂದ್ರ ಗೃಹ ಮಂತ್ರಿ ಮುನಿರಾಬಾದ್ ಬಿಟ್ಟರೆ ಎರಡನೇ ಐಆರ್ಬಿ ಆಡಳಿತ ಕಚೇರಿ ಇದಾಗಿದೆ. ಒಟ್ಟು 730ಕ್ಕೂ ಹೆಚ್ಚು ಸಿಬ್ಬಂದಿ ವಿಜಯಪುರ ವಿಭಾಗದ ಬೆಟಾಲಿಯನ್ ಅಡಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2010 ರಿಂದ ಇವರ ಕರ್ತವ್ಯ ನಿರ್ವಹಣೆಗೆ ಸ್ವಂತ ಕಟ್ಟಡವಿಲ್ಲದ ಕಾರಣ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಓದಿ-ಸಂಕ್ರಮಣದ ಕೆಟ್ಟ ಕರಿ ದಿನವೇ ಭೀಕರ ರಸ್ತೆ ಅಪಘಾತ.. ಬಾರದ ಲೋಕಕ್ಕೆ ತೆರಳಿದ ಬಾಲ್ಯದ ಗೆಳತಿಯರು!
ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿ ಅನುದಾನ ಸಹ ಬಿಡುಗಡೆಗೊಂಡ ಮೇಲೆ 2017ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಗೊಂಡು ಈಗ ಸಿದ್ದವಾಗಿದೆ. ಒಟ್ಟು 451 ಕ್ವಾರ್ಟರ್ಸ್ ಸೇರಿ ಆಡಳಿತ ಕಚೇರಿ ನಿರ್ವಹಣೆ ಸಹ ಮಾಡಿಕೊಡಲು ಅನುವು ಮಾಡಿಕೊಡಲಾಗಿದೆ.
ಕಚೇರಿ ಸಿಬ್ಬಂದಿ ಸೇರಿದಂತೆ ಕೇಂದ್ರ ಕಚೇರಿಯಿಂದ ನೇರ ವಿಡಿಯೋ ಸಂವಾದ ನಡೆಸಲು ಅಡಿಟೋರಿಯಂ ಸಹ ಇಲ್ಲಿದೆ. ಸುಮಾರು 250ಕ್ಕೂ ಹೆಚ್ಚು ಜನ ಕುಳಿತು ಮೇಲಾಧಿಕಾರಿಗಳ ಆಜ್ಞೆ, ಸಂದೇಶ, ಸಲಹೆ ಸೂಚನೆಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ.
ನಾಳೆ ಜ.16 ರಂದು ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವರ್ಚುಯಲ್ ವಿಡಿಯೋ ಕಾನ್ಫರೆನ್ಸ್ ಮೂಲಕ ಕಟ್ಟಡ ಉದ್ಘಾಟನೆ ನಡೆಸಿ ಸಿಬ್ಬಂದಿಯನ್ನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.