ಮುದ್ದೇಬಿಹಾಳ :ತಾಲೂಕಿನ ಹಿರೇಮುರಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡಕ್ಕೂ ಅವಿರೋಧ ಆಯ್ಕೆ ನಡೆದಿದ್ದು, ವಿಜಯೋತ್ಸವ ಆಚರಣೆಯ ವೇಳೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತರು ಜಟಾಪಟಿ ನಡೆಸಿದ ಘಟನೆ ಶನಿವಾರ ನಡೆದಿದೆ.
ಗ್ರಾ.ಪಂ ಸಭಾಭವನದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಹಿಂದುಳಿದ ವರ್ಗ ಆ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ರೇಣುಕಾ ಪರಮಣ್ಣ ನಾಗಾವಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾರುತಿ ಸಂಗಪ್ಪ ಭೋವಿ ಇಬ್ಬರೇ ನಾಮಪತ್ರ ಸಲ್ಲಿಸಿದ ಕಾರಣ ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಎಲ್. ಜಾಧವ್ ಘೋಷಿಸಿದರು.
ಹಿರೇಮುರಾಳ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡಕ್ಕೂ ಅವಿರೋಧ ಆಯ್ಕೆ ನಡೆಯಿತು. ವಿಜಯೋತ್ಸವದಲ್ಲಿ ಅಂತರ:
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗುತ್ತಿದ್ದಂತೆ ಪಂಚಾಯತ್ನ ಹೊರಗಡೆ ವಿಜಯೋತ್ಸವ ಆಚರಣೆಗೆ ಮುಂದಾದರು. ಈ ವೇಳೆ ಮುಖಂಡ ಬಸವಂತ್ರಾಯ ಭೋವಿ ಮಾತನಾಡಿ, ಗ್ರಾಮ ಪಂಚಾಯತ್ನಲ್ಲಿ ಪಕ್ಷಾತೀತವಾಗಿ ಆಯ್ಕೆ ಮಾಡಲಾಗಿದ್ದು ಎಲ್ಲರೂ ಜೊತೆಗೂಡಿ ಅಭಿವೃದ್ಧಿಗೆ ಮುಂದಾಗುವಂತೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪಿಸಿದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಹಾಗೂ ಬೆಂಬಲಿಗರು ಅಧ್ಯಕ್ಷೆಯನ್ನು ಪ್ರತ್ಯೇಕವಾಗಿ ಕರೆದೊಯ್ದು ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡಿ ಕಾಂಗ್ರೆಸ್ ಪರ ಘೋಷಣೆಗಳನ್ನು ಕೂಗಿದರು. ಅಲ್ಲದೇ ಅಧ್ಯಕ್ಷೆ ರೇಣುಕಾ ತಾವು ಕಾಂಗ್ರೆಸ್ ಪಕ್ಷದ ಬೆಂಬಲಿತರೆಂದು ಹೇಳಿಕೊಂಡರು.
ಗ್ರಾಪಂ ಚುನಾವಣೆ ಫಲಿತಾಂಶದ ವಿಜಯೋತ್ಸವ ಆಚರಣೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಇದರಿಂದ ಪ್ರಚೋದಿತರಾದ ಬಿಜೆಪಿ ಬೆಂಬಲಿಗರು ಉಪಾಧ್ಯಕ್ಷರನ್ನೂ ಸಹ ಪ್ರತ್ಯೇಕವಾಗಿ ಕರೆದೊಯ್ದು ವಿಜಯೋತ್ಸವ ಆಚರಿಸಿದರು. ಮುದ್ದೇಬಿಹಾಳ-ನಾಲತವಾಡ ರಸ್ತೆಯಲ್ಲಿ ಪಟಾಕಿ ಸಿಡಿಸಿ ಬಿಜೆಪಿ ಧ್ವಜವನ್ನು ಹಿಡಿದು ಬಿಜೆಪಿ ಪರ ಘೋಷಣೆಗಳನ್ನು ಕೂಗಿದರು. ಬಳಿಕ ಉಪಾಧ್ಯಕ್ಷ ಮಾರುತಿ ಭೋವಿ ತಾವು ಬಿಜೆಪಿ ಬೆಂಬಲಿತ ಎಂದು ಹೇಳಿಕೊಂಡರು.
ಗ್ರಾಪಂ ಚುನಾವಣೆ ಫಲಿತಾಂಶದ ವಿಜಯೋತ್ಸವ ಆಚರಣೆಯಲ್ಲಿ ಬಿಜೆಪಿ ಬೆಂಬಲಿಗರು ವಿಜಯೋತ್ಸವ ಆಚರಣೆ ಸಂಬಂಧ ಕೆಲಕಾಲ ಎರಡೂ ಪಕ್ಷದ ಬೆಂಬಲಿಗರನ್ನು ಗೊಂದಲದಲ್ಲಿ ಮುಳುಗುವಂತೆ ಮಾಡಿದ್ದು ಅಂತಿಮವಾಗಿ ಎರಡೂ ಪಕ್ಷದವರು ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು.