ಮುದ್ದೇಬಿಹಾಳ: ಯುಜಿಡಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸೂಚಿಸಲಾಗಿದ್ದು ಮುಂಬರುವ ಮಾರ್ಚ್-ಏಪ್ರಿಲ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.
ಯುಜಿಡಿ ಕೆಲಸ ಮಾರ್ಚ್-ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ: ಜಿಲ್ಲಾಧಿಕಾರಿ - muddebihala news
ಅಭಿವೃದ್ಧಿಪಡಿಸದ ಲೇಔಟ್ ಹರಾಜು,ಸ್ವಾಧೀನ. ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನಗಳ ಅಭಿವೃದ್ಧಿ, ಪುರಸಭೆಗೆ ಬರಬೇಕಿರುವ ಗ್ರಾಪಂಗಳ ಆಸ್ತಿಗಳ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಹೇಳಿದರು.
![ಯುಜಿಡಿ ಕೆಲಸ ಮಾರ್ಚ್-ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ: ಜಿಲ್ಲಾಧಿಕಾರಿ ನಾಲತವಾಡ ಪಟ್ಟಣದ ಅಧಿಕಾರಿಗಳ ಸಭೆ](https://etvbharatimages.akamaized.net/etvbharat/prod-images/768-512-8744655-thumbnail-3x2-nin.jpg)
ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಮತಕ್ಷೇತ್ರದ ತಾಳಿಕೋಟಿ,ಮುದ್ದೇಬಿಹಾಳ ಹಾಗೂ ನಾಲತವಾಡ ಪಟ್ಟಣದ ಅಧಿಕಾರಿಗಳ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.ಅಭಿವೃದ್ಧಿಪಡಿಸದ ಲೇಔಟ್ ಹರಾಜು,ಸ್ವಾಧೀನ. ಮುದ್ದೇಬಿಹಾಳ ಪುರಸಭೆ ವ್ಯಾಪ್ತಿಯಲ್ಲಿರುವ ಉದ್ಯಾನವನಗಳ ಅಭಿವೃದ್ಧಿ, ಪುರಸಭೆಗೆ ಬರಬೇಕಿರುವ ಗ್ರಾಪಂಗಳ ಆಸ್ತಿಗಳ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಯುಜಿಡಿ ಕೆಲಸ ಮುಗಿದ ನಂತರ ಮುಖ್ಯಕೊಳವೆಗೆ ಜನರೇ ಸಂಪರ್ಕ ಪಡೆದುಕೊಳ್ಳಬೇಕು.ಅದಕ್ಕೆ ಸರ್ಕಾರದಿಂದ ಶುಲ್ಕ ನಿಗದಿ ಮಾಡಲಾಗುತ್ತದೆ.ಎಷ್ಟು ಮೀಟರ್ ಅಂತರವಾಗುತ್ತದೋ ಅದಕ್ಕೆ ತಕ್ಕಂತೆ ಸಾರ್ವಜನಿಕರು ಶುಲ್ಕ ಭರಿಸಿ ಸಂಪರ್ಕ ಪಡೆದುಕೊಳ್ಳಬೇಕು ಎಂದು ಹೇಳಿದರು.