ಕರ್ನಾಟಕ

karnataka

ETV Bharat / state

ವಿಜಯಪುರ: ಸಿಡಿಲು ಬಡಿದು ಇಬ್ಬರು ಸಹೋದರರು ಸಾವು - ಸಿಡಿಲು ಬಡಿದು ಇಬ್ಬರು ಕುರಿ ಗಾಹಿಗಳ ಸಾವು

ಸಿಡಿಲು ಬಡಿದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡ ಕುರಳಿ ಗ್ರಾಮದ ಇಬ್ಬರು ಸಾವನ್ನಪ್ಪಿದ್ದಾರೆ.

two sheep man died due to thunderbolt in Vijayapura
ಸಿಡಿಲು

By

Published : Apr 18, 2022, 8:20 PM IST

ವಿಜಯಪುರ:ಸಿಡಿಲು ಬಡಿದು ಇಬ್ಬರು ಕುರಿಗಾಹಿ ಸಹೋದರರು ಸಾವನ್ನಪ್ಪಿದ್ದಾರೆ. ಇದೇ ವೇಳೆ 9 ಕುರಿಗಳು ಅಸುನೀಗಿವೆ. ಈ ಘಟನೆ ಕೋಲ್ಹಾರ ತಾಲೂಕಿನ ಚೀರಲದಿನ್ನಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕುರಿಗಾಹಿ ಬೀರಪ್ಪ ಬಡೆಗೋಳ (20), ಮಹೇಶ ಬಡೆಗೋಳ (14) ಮೃತರು.


ಮೃತರಿಬ್ಬರು ಸಹೋದರಾಗಿದ್ದು ಮೂಲತ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಜೋಡ ಕುರಳಿ ಗ್ರಾಮದವರು ಎಂದು ತಿಳಿದು ಬಂದಿದೆ. ಕೋಲ್ಹಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಬಂಡೀಪುರ ರಸ್ತೆಬದಿ ಮೂತ್ರ ವಿಸರ್ಜಿಸುತ್ತಿದ್ದ ವ್ಯಕ್ತಿ ಮೇಲೆ ಕಾಡಾನೆ ದಾಳಿ : ಕೂದಲೆಳೆಯಲ್ಲಿ ಪಾರು

ABOUT THE AUTHOR

...view details