ವಿಜಯಪುರ: ಟಗರು ಕಾಳಗದ ಅಖಾಡದಲ್ಲೇ ಎರಡು ಟಗರುಗಳು ಸಾವನ್ನಪ್ಪಿರುವ ಘಟನೆ ಬಸವನ ಬಾಗೇವಾಡಿ ಜಾತ್ರೆ ವೇಳೆ ನಡೆದಿದೆ. ಕಾಳಗದಲ್ಲಿ ಎದುರಾಳಿಯ ಒಂದೇ ಡಿಚ್ಚಿಗೆ ಸ್ಥಳದಲ್ಲೇ ಟಗರುಗಳು ಉಸಿರು ಚೆಲ್ಲಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ದಿನಗಳ ಹಿಂದೆ ಬಸವನ ಬಾಗೇವಾಡಿ ಜಾತ್ರೆಯಲ್ಲಿ ಟಗರು ಕಾಳಗ ನಡೆದಿತ್ತು. ಈ ವೇಳೆ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮ ಹಾಗೂ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಟಗರುಗಳು ಸಾವಿಗೀಡಾಗಿವೆ. ಬಾಗಲಕೋಟೆ ಜಿಲ್ಲೆಯ ಬೆನಕಟ್ಟಿ ಗ್ರಾಮದ ಟಗರು ಗುದ್ದಿದ ಪರಿಣಾಮ ಈ ಎರಡು ಟಗರುಗಳು ಪ್ರಾಣಬಿಟ್ಟಿವೆ ಎಂದು ತಿಳಿದುಬಂದಿದೆ.