ವಿಜಯಪುರ:ಬಸವನಬಾಗೇವಾಡಿ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಇಬ್ಬರು ದರೋಡೆಕೋರರನ್ನು ಬಂಧಿಸಲಾಗಿದೆ. ಬಂಧಿತರಿಂದ 92,500 ರೂ. ಮೌಲ್ಯದ 30 ಗ್ರಾಂ ಚಿನ್ನಾಭರಣ, 2,92,600 ರೂ. ಮೌಲ್ಯದ ಕಾರು ವಶ ಪಡಿಸಿಕೊಂಡಿದ್ದಾರೆ.
ಇಬ್ಬರು ದರೋಡೆಕೋರರ ಬಂಧನ.. ಚಿನ್ನಾಭರಣ, 2.9 ಲಕ್ಷ ಮೌಲ್ಯದ ಕಾರು ವಶಕ್ಕೆ - Vijaypura latest news
ಬಸವನಬಾಗೇವಾಡಿ ಪೊಲೀಸರು ನಡೆಸಿರುವ ಕಾರ್ಯಾಚರಣೆಯಲ್ಲಿ ಇಬ್ಬರು ದರೋಡೆಕೋರರನ್ನು ಬಂಧಿಸಲಾಗಿದೆ. ಬಂಧಿತರಿಂದ 92,500 ರೂ. ಮೌಲ್ಯದ 30 ಗ್ರಾಂ ಚಿನ್ನಾಭರಣ, 2,92,600 ರೂ. ಮೌಲ್ಯದ ಕಾರು ವಶ ಪಡಿಸಿಕೊಂಡಿದ್ದಾರೆ.
ಇಬ್ಬರು ದರೋಡೆಕೋರರ ಬಂಧನ..
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ-ಮನಗೂಳಿ ರಸ್ತೆಯಲ್ಲಿ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್, ಮನಗೂಳಿ ಬಳಿ 2 ಕಡೆ ದರೋಡೆ ಮಾಡಿದ್ದ, ಕಾಂತಪ್ಪ ನಿಂಗಪ್ಪ ನಂದಿ (22), ಪ್ರೇಮಕುಮಾರ ಮಹಾದೇವ ಗೊಳಸಂಗಿ (28) ಎಂಬ ದರೋಡೆಕೋರರ ಹೆಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಸವನಬಾಗೇವಾಡಿ ಸಿಪಿಐ ಮಹಾದೇವ ಶಿರಹಟ್ಟಿ, ಬಿಎಸ್ಐ ಗುರುಶಾಂತ ದಾಶ್ಯಾಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.