ವಿಜಯಪುರ :ವಿಜಯಪುರ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು ಕೊಲೆ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ನೀಡಿದ ಮಾಹಿತಿ ಆಧಾರದ ಮೇಲೆ ಕೊಲೆಯಾದ ರೇಷ್ಮಾಳ ಭಯಾನಕ ಮುಖವಾಡ ಬಯಲಾಗಿದೆ. ಪ್ರಮುಖ ಆರೋಪಿ ಮಹಾರಾಷ್ಟ್ರದ ಎಂಐಎಂ ಮುಖಂಡ ತೌಫಿಕ್ ಶೇಖ್ ಹಾಗೂ ಮತ್ತೋರ್ವ ಆರೋಪಿ ಆತನ ಕಾರು ಚಾಲಕ ಇಜಾಜ್ ಬಿರಾದಾರ ಬಂಧಿತ ಆರೋಪಿಗಳು. ಇನ್ನೊಬ್ಬ ಪರಾರಿಯಾಗಿದ್ದಾನೆ.
ಎಂಐಎಂ ಮುಖಂಡ ತೌಫಿಕ್‌ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರೇಷ್ಮಾ ಪಡೇಕನೂರ. ಹಣ ಹಾಗೂ ಆಸ್ತಿಗಾಗಿ ತೌಫಿಕ್‌ನ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಎಸ್ಪಿ ಪ್ರಕಾಶ ನಿಕ್ಕಂ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ತೌಫಿಕ್‌ನ ಎಂಟು ಎಕರೆ ಆಸ್ತಿ ತನ್ನ ಹೆಸರಿಗೆ ಬರೆಯುವಂತೆ ರೇಷ್ಮಾ ಬ್ಲ್ಯಾಕ್‌ಮೇಲ್ ಮಾಡಿದ್ದಳಂತೆ. ಜತೆಗೆ ಹಣ ಕೊಡುವಂತೆ ಪೀಡಿಸುತ್ತಿದ್ದಳಂತೆ ರೇಷ್ಮಾ ಪಡೇಕನೂರ. ಇದರಿಂದ ಬೇಸತ್ತು ತೌಫಿಕ್ ಹಾಗೂ ಆತನ ಇಬ್ಬರು ಸಹಚರರು ಸೇರಿ ಆಕೆಯನ್ನ ಕೊಲೆ ಮಾಡಿದ್ದಾರೆ.
ವಿಜಯಪುರ ಕಾಂಗ್ರೆಸ್ ಮುಖಂಡೆ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಮೇ16ರಂದು ರೇಷ್ಮಾ ಪಡೇಕನೂರಳನ್ನು ಆರೋಪಿ ತೌಫಿಕ್ ಹಾಗೂ ಕಾರು ಚಾಲಕ ಇಜಾಜ್ ಹಾಗೂ ಇನ್ನೊಬ್ಬ ಸೇರಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ಕಾರಿನಲ್ಲಿ ತೌಫಿಕ್ ಹಾಗೂ ರೇಷ್ಮಾ ನಡುವೆ ಜಗಳವಾದಾಗ ಬಾಯಿ ಮುಚ್ಚಿ ಕೊಲೆ ಮಾಡಿದ್ದಾರೆ. ನಂತರ ಕೊಲ್ಹಾರ ಸೇತುವೆ ಮೇಲಿಂದ ರೇಷ್ಮಾ ಶವ ಎಸೆದು ಆರೋಪಿಗಳು ಪರಾರಿಯಾಗಿದ್ದರು. ನಿನ್ನೆ ಝಳಕಿ ಬಳಿಯ ಹಲಸಂಗಿಯಲ್ಲಿ ಆರೋಪಿಗಳು ಇರುವ ಮಾಹಿತಿ ಪಡೆದು ಅವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಪ್ರಕಾಶ ನಿಕ್ಕಂ ಹೇಳಿದರು. ಇನ್ನೂ ಹೆಚ್ಚಿನ ತನಿಖೆ ನಡೆಸಬೇಕಾಗಿರುವ ಕಾರಣ ಇಬ್ಬರೂ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದರು.