ಕರ್ನಾಟಕ

karnataka

ETV Bharat / state

ಕಲ್ಲಿನ ಪಡೆಯಲ್ಲಿ ನೀರು ತುಂಬಲು ಹೋದ ಇಬ್ಬರ ದುರ್ಮರಣ! - two people died in muddhebihala

ಕ್ರಿಮಿನಾಶಕಕ್ಕೆ ನೀರು ಮಿಶ್ರಣ ಮಾಡಲು ಕಲ್ಲಿನ ಪಡೆಯಲ್ಲಿ ನೀರು ತರಲು ಹೋದ ವೇಳೆ ಇಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ.

muddhebihala
ಇಬ್ಬರ ದುರ್ಮರಣ

By

Published : Dec 2, 2020, 3:22 PM IST

ಮುದ್ದೇಬಿಹಾಳ:ತೊಗರಿ ಬೆಳೆಗೆ ಸಿಂಪಡಿಸುವ ಕ್ರಿಮಿನಾಶಕಕ್ಕೆ ನೀರು ಮಿಶ್ರಣ ಮಾಡಲು ಕಲ್ಲಿನ ಪಡೆಯಲ್ಲಿ ನೀರು ತರುವ ವೇಳೆ ಕಾಲು ಜಾರಿ ಬಿದ್ದು ಇಬ್ಬರು ಕೂಲಿಕಾರ್ಮಿಕರು ದುರ್ಮರಣಕ್ಕೀಡಾಗಿರುವ ಘಟನೆ ತಾಳಿಕೋಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ತಾಳಿಕೋಟೆ ನಿವಾಸಿ ಡೋಗರಿ ಬೀಳಗಿ ಅವರ ಹೊಲದಲ್ಲಿ ತೊಗರಿ ಬೆಳೆಗೆ ಎಣ್ಣಿ ಹೊಡೆಯಲು ಕೊಡದಿಂದ ನೀರು ಹಾಕಲು ಹೋಗಿದ್ದಾರೆ. ನೀರು ಖಾಲಿ ಆದಾಗ ಸಮೀಪದಲ್ಲಿದ್ದ ಪಡೆಯಲ್ಲಿ ನೀರು ತುಂಬಲು ಹೋದಾಗ ಕಾಲು ಜಾರಿ ಬಿದ್ದು, ಆಶ್ರಯ ಕಾಲೊನಿಯ ಕೂಲಿ ಕಾರ್ಮಿಕಳಾದ ಲಕ್ಷ್ಮೀಬಾಯಿ ಕಾಶೀನಾಥ ತಳವಾರ (48) ಹಾಗೂ ಅಂಜಲಿ ದೇವರಾಜ ಅಂಬಿಗೇರ(14) ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ನೀರು ತರುವ ವೇಳೆ ಕಾಲು ಜಾರಿ ಬಿದ್ದು ಇಬ್ಬರು ಕೂಲಿಕಾರ್ಮಿಕರು ಸಾವನ್ನಪ್ಪಿದ್ದಾರೆ.

ಇನ್ನು ತಾಳಿಕೋಟೆ ಪಿಎಸ್​ಐ ಶಿವಾಜಿ ಪವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details