ವಿಜಯಪುರ:ಕೃಷ್ಣಾ ನದಿ ಹಿನ್ನೀರಿನಲ್ಲಿ ಚಕ್ಕಡಿ ಮುಳುಗಿ ಎರಡು ಎತ್ತುಗಳು ಸಾವನ್ನಪ್ಪಿರುವ ಘಟನೆ ಮುದ್ದೇಬಿಹಾಳ ತಾಲ್ಲೂಕಿನ ಹುನಕುಂಟಿ ಗ್ರಾಮದಲ್ಲಿ ನಡೆದಿದೆ.
ಕೃಷ್ಣಾ ನದಿ ಹಿನ್ನೀರಿನಲ್ಲಿ ಚಕ್ಕಡಿ ಮುಳುಗಿ ಜೋಡೆತ್ತು ಸಾವು - ಮುದ್ದೇಬಿಹಾಳ ತಾಲ್ಲೂಕಿನ ಹುನಕುಂಟಿ ಗ್ರಾಮ
ಗುಂಡಪ್ಪ ಭೀಮಪ್ಪ ಮುದೂರ ಎಂಬುವರಿಗೆ ಸೇರಿದ ಎತ್ತುಗಳು ಕೃಷ್ಣಾ ನದಿ ಹಿನ್ನೀರಿನಲ್ಲಿ ಮುಳುಗಿ ಸಾವನ್ನಪ್ಪಿವೆ. ಈ ಘಟನೆಯು ಮುದ್ದೇಬಿಹಾಳ ತಾಲೂಕಿನ ಹುನಕುಂಟಿ ಗ್ರಾಮದಲ್ಲಿ ನಡೆದಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೃಷ್ಣಾ ನದಿ ಹಿನ್ನೀರಿನಲ್ಲಿ ಚಕ್ಕಡಿ ಮುಳುಗಿ 2 ಎತ್ತುಗಳು ಸಾವು
ಗುಂಡಪ್ಪ ಭೀಮಪ್ಪ ಮುದೂರ ಎಂಬುವರಿಗೆ ಸೇರಿದ ಎತ್ತುಗಳು ಘಟನೆಯಲ್ಲಿ ಮೃತಪಟ್ಟಿವೆ. ಹೊಲದಲ್ಲಿ ಕೆಟ್ಟಿದ್ದ ಮೋಟರ್ ತರಲು ಹೋದ ವೇಳೆ, ಹಿನ್ನೀರಿನ ನದಿ ಪಾತ್ರದಲ್ಲಿನ ತಗ್ಗಿನಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಎತ್ತಿನ ಚಕ್ಕಡಿ ಮುಗುಚಿ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಘಟನೆಯಲ್ಲಿ ಇಬ್ಬರು ರೈತರು, ಓರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಎರಡು ಎತ್ತುಗಳು ಅಸುನೀಗಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.