ಕರ್ನಾಟಕ

karnataka

ETV Bharat / state

ವಿಜಯಪುರ ಡಿಎಚ್ಒ ಹುದ್ದೆಗೆ ಇಬ್ಬರು ಅಧಿಕಾರಿಗಳ ಪೈಪೋಟಿ.. ಕುತೂಹಲ ಕೆರಳಿಸಿದ ಮುಸುಕಿನ ಗುದ್ದಾಟ

ಹಿಂದೆ ಡಿಎಚ್ಒ ಆಗಿದ್ದ ರಾಜಕುಮಾರ ಯರಗಲ್ ಅವರನ್ನು ಸರ್ಕಾರ ಸೆ.21 ರಂದು ವರ್ಗಾವಣೆ ಮಾಡಿ,ಅವರ ಸ್ಥಾನಕ್ಕೆ ಪ್ರಭಾರಿ ಡಾ.ಸುರೇಶ ಚವ್ಹಾಣ ಅವರನ್ನು ನೇಮಕಗೊಳಿಸಿತ್ತು. ಆದರೆ ಸರ್ಕಾರದ ಆದೇಶ ಪ್ರಶ್ನಿಸಿ ಹಿಂದಿನ ಡಿಎಚ್ಒ ರಾಜಕುಮಾರ ಯರಗಲ್ ಕೆಎಟಿಗೆ ಮೊರೆ ಹೋಗಿದ್ದರು.

Dr. Suresh Chavan, Dr Rajkumar Yargal
ಡಿಎಚ್ಒ ಪ್ರಭಾರಿ ಡಾ.ಸುರೇಶ ಚವ್ಹಾಣ್, ವರ್ಗಾವಣೆಗೊಂಡಿದ್ದ ಡಾ ರಾಜಕುಮಾರ ಯರಗಲ್

By

Published : Dec 21, 2022, 7:29 PM IST

ವಿಜಯಪುರ ಡಿಎಚ್ಒ ಹುದ್ದೆಗೆ ಇಬ್ಬರ ಅಧಿಕಾರಿಗಳು ಪೈಪೋಟಿ

ವಿಜಯಪುರ:ಜಿಲ್ಲಾ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಇಲಾಖೆ(ಡಿಎಚ್ಒ) ಹುದ್ದೆಗೆ ಇಬ್ಬರು ಅಧಿಕಾರಿಗಳು ನಡೆಸುತ್ತಿರುವ ಮುಸುಕಿನ ಗುದ್ದಾಟ ಈಗ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದೆ. ಅಧಿಕಾರಿಗಳಾದ ಡಾ ರಾಜಕುಮಾರ ಯರಗಲ್ ಹಾಗೂ ಡಾ ಸುರೇಶ ಚವ್ಹಾಣ್ ಇಬ್ಬರು ಡಿಎಚ್ಒ ಹುದ್ದೆ ಪಡೆಯಲು ಪೈಪೋಟಿ ನಡೆಸುತ್ತಿರುವ ಅಧಿಕಾರಿಗಳು.

ಹಿಂದೆ ಡಿಎಚ್ಒ ಆಗಿ ಕಾರ್ಯನಿರ್ವಹಿಸುತ್ತಿದ್ದ ರಾಜಕುಮಾರ ಯರಗಲ್ ಅವರನ್ನು ಸರ್ಕಾರ ಸೆಪ್ಟೆಂಬರ್ 21 ರಂದು ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಅವರ ಸ್ಥಾನಕ್ಕೆ ಪ್ರಭಾರಿ ಡಾ.ಸುರೇಶ ಚವ್ಹಾಣ ಅವರನ್ನು ನೇಮಕ ಮಾಡಿತ್ತು. ಸರ್ಕಾರದ ಆದೇಶದಂತೆ ಡಾ. ಸುರೇಶ ಚವ್ಹಾಣ ಅಧಿಕಾರವನ್ನು ಸಹ ಸ್ವೀಕರಿಸಿದ್ದರು. ಆದರೆ ಸರ್ಕಾರದ ಆದೇಶ ಪ್ರಶ್ನಿಸಿ ಹಿಂದಿನ ಡಿಎಚ್ಒ ರಾಜಕುಮಾರ ಯರಗಲ್ ಕೆಎಟಿ (ಕರ್ನಾಟಕ ನ್ಯಾಯಮಂಡಳಿ) ಮೊರೆ ಹೋಗಿದ್ದರು. ಡಿಎಚ್ಒ ಹುದ್ದೆಗಾಗಿ‌ ಕಾನೂನು ಹೋರಾಟ ನಡೆಸಿದ್ದ ಯರಗಲ್ ಅವರಿಗೆ ಡಿಸೆಂಬರ್ 15 ರಂದು ಅವರ ಪರ ಕೆಎಟಿ ತೀರ್ಪು ನೀಡಿದೆ.

ಅದೇ ಆದೇಶ ಪಡೆದಿರುವ ಯರಗಲ್ ಅವರು, ಡಾ.ಸುರೇಶ ಚವ್ಹಾಣಗೆ ಹುದ್ದೆ ಖಾಲಿ ಮಾಡಿ ಎಂದು ಕೇಳಿದ್ದಾರೆ. ಆದರೆ ತಮ್ಮನ್ನು ಸರ್ಕಾರ ನೇಮಿಸಿದೆ ಎಂದು ಡಿಎಚ್ಒ ಸ್ಥಾನದ ಹುದ್ದೆ ಬಿಟ್ಟುಕೊಟ್ಟಿಲ್ಲ. ಅಲ್ಲಿಂದ ಕುರ್ಚಿ ಕಾಳಗ ಶುರುವಾಗಿದ್ದೂ, ಅದು ಎಷ್ಟರ ಮಟ್ಟಿಗೆ ಹೋಗಿತ್ತೆಂದರೆ ಡಿಎಚ್ಒ ಕಚೇರಿಗೆ ಎರಡೆರಡು ಬೀಗ ಜಡಿಯಬೇಕಾಯಿತು.

ಇದು ಸುಮಾರು ಒಂದು ವಾರದವರೆಗೆ ಮುಂದುವರಿದಿತ್ತು. ಇಬ್ಬರ ಜಗಳದಲ್ಲಿ‌ ಕೂಸು ಬಡವಾಯಿತು ಎಂಬಂತೆ ಸಿಬ್ಬಂದಿ ಗಳು ಪೇಚಿಗೆ ಸಿಲುಕು ವಂತಾಯಿತು. ಅವರ ಕುರ್ಚಿ ಗಲಾಟೆ ಕಚೇರಿಗೆ ಬರುವ ಜನರು ಸಹ ಮಾತನಾಡಿಕೊಳ್ಳುವಂತಾಯಿತು.‌ ಅದನ್ನು ಅರಿತ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ನನವರ ಮಧ್ಯೆ ಪ್ರವೇಶಿಸಿದ ನಂತರ ಕಚೇರಿ ಬೀಗ ತೆಗೆಯಲಾಯಿತು. ಅಷ್ಟಾದರೂ ಸುಮ್ಮನಿರದ ಅಧಿಕಾರಿಗಳು ಮುಸುಕಿನ ಗುದ್ದಾಟ ನಡೆಸುತ್ತಲೇ ಬಂದಿದ್ದಾರೆ.

ಡಿಎಚ್ಒಗೆ ನೀಡುವ ವಾಹನವನ್ನು ನಿನ್ನೆ ಎಂದಿನಂತೆ ಗ್ರಾಮೀಣ ಭಾಗದ ಆರೋಗ್ಯ ಉಪಕೇಂದ್ರ ವೀಕ್ಷಣೆಗೆ ಡಾ. ಸುರೇಶ ಚವ್ಹಾಣ ತೆಗೆದುಕೊಂಡು ಹೋಗಿದ್ದರು. ಈ ಮಧ್ಯೆ ನಿನ್ನೆ ಕಚೇರಿಗೆ ಬಂದಿದ್ದ ಡಾ. ರಾಜಕುಮಾರ ಯರಗಲ್ ಅವರು ಪ್ರಭಾರ ಡಾ.ಸುರೇಶ ಭೇಟಿಯಾಗಲು ಕಾಯ್ದು ಕುಳಿತರೂ ಅವರು ಬಾರದ ಕಾರಣ ಅಲ್ಲಿಂದ ತರಾತುರಿಯಲ್ಲಿ‌ ಜಾಗ ಖಾಲಿ ಮಾಡಿ ಹೋಗಬೇಕಾಯಿತು.

ಆಯುಕ್ತರಿಂದ ಯರಗಲ್ ಗೆ ನೋಟಿಸ್ : ಈ ಮಧ್ಯೆ ಇಬ್ಬರ ಮುಸುಕಿನ ಗುದ್ದಾಟಕ್ಕೆ ಬ್ರೇಕ್ ಹಾಕಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಡಾ. ರಾಜಶೇಖರ ಯರಗಲ್ ಅವರಿಗೆ ಡಿ. 20ರಂದು ನೋಟಿಸ್ ಜಾರಿ ಮಾಡಿದ್ದಾರೆ. ಸರ್ಕಾರ ವರ್ಗಾವಣೆ ಮಾಡಿದ ಮೇಲೆ ಅಲ್ಲಿ ಸ್ಥಳ ನಿಯುಕ್ತ ಆಗುವವರೆಗೂ ಪ್ರಭಾರಿಯಾಗಿ ಡಾ. ಸುರೇಶ ಅವರನ್ನು ನೇಮಕ ಮಾಡಿದೆ.

ನಂತರ ತಮ್ಮನ್ನು ಬೆಂಗಳೂರು ಆಯುಕ್ತರ ಕಚೇರಿಗೆ ಹಾಜರಾಗಲು ಸೂಚನೆ ನೀಡಿದ್ದರೂ, ಹಾಜರಾಗದ ತಾವು ಕೆಎಟಿ ಮೊರೆ ಹೋಗಿದ್ದೀರಿ. ಈಗ ಕೆಎಟಿ ಸರ್ಕಾರದ ಆದೇಶ ರದ್ದು ಪಡಿಸಿದೆ. ಸದ್ಯ ಯಾವುದೇ ದೃಢೀಕರಣ ಇಲ್ಲದೇ ಸಿಟಿಸಿ ಸಹಿ ಮಾಡಿದ್ದು, ತಕ್ಷಣ ಸರ್ಕಾರದ ಮುಂದಿನ ಆದೇಶ ಬರುವವರೆಗೆ ಆಯುಕ್ತರ ಕಚೇರಿಗೆ ಹಾಜರಾಗುವಂತೆ ಸೂಚನೆ ನೀಡಿದೆ.

ಕುತೂಹಲ ಕೆರಳಿಸಿದ ನಡೆ:ಸದ್ಯ ಬುಧವಾರ ಡಾ.ಸುರೇಶ ಚವ್ಹಾಣ್​ ಪ್ರಭಾರ ಡಿಎಚ್ಒ ಆಗಿ ಮುಂದೆವರಿದಿದ್ದಾರೆ. ಸರ್ಕಾರದ ವರ್ಗಾವಣೆ ಆದೇಶಕ್ಕೆ ಸವಾಲ್ ಹಾಕಿರುವ ಡಾ. ರಾಜಕುಮಾರ ಯರಗಲ್ ಬೆಂಗಳೂರು ಆಯುಕ್ತರ ಕಚೇರಿಗೂ ಹಾಜರಾಗಿಲ್ಲ. ಈಗ ಅವರ ಮುಂದಿನ ನಡೆ ಕುತೂಹಲ‌ ಕೆರಳಿಸಿದೆ.

ಇದನ್ನೂಓದಿ:ಚಿರತೆ ಹೆಜ್ಜೆ ಗುರುತು: ಸೆರೆ ಹಿಡಿಯಲು ರಾತ್ರಿಯಿಡೀ ಗಸ್ತು ತಿರುಗಿದ ಜನ

ABOUT THE AUTHOR

...view details