ವಿಜಯಪುರ: ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗದೇ ಇರುವುದು ಜಿಲ್ಲೆಯ ಜನತೆಗೆ ರಿಲೀಫ್ ಸಿಕ್ಕಂತಾಗಿತ್ತು. ಆದರೆ ಇಂದು ಮತ್ತೆ 2 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಆತಂಕ ಇನ್ನಷ್ಟು ಹೆಚ್ಚಾಗಿದೆ.
ಚಪ್ಪರ ಬಂದ್ ಬಡಾವಣೆಯಲ್ಲಿ ರೋಗಿ ಸಂಖ್ಯೆ 221ರ ವೃದ್ಧೆಯಿಂದಲೇ ಇಂದು ಇಬ್ಬರಿಗೂ ಸೋಂಕು ತಗುಲಿದೆ. ವಿಜಯಪುರ ನಗರದಲ್ಲಿ ಲಾಕ್ಡೌನ್ಗೆ ಜನ ಅಷ್ಟಾಗಿ ಸ್ಪಂದಿಸುತ್ತಿಲ್ಲ ಎಂದು ಜಿಲ್ಲಾಡಳಿತ ಸೀಲ್ಡೌನ್ ಪ್ರದೇಶ ಸೇರಿದಂತೆ ಎಲ್ಲ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.
ಅಲ್ಲಲ್ಲಿ ಸಿಸಿ ಟಿವಿ ಅಳವಡಿಸಿದ್ದು, ಈ ಮೂಲಕ ಜನರ ಚಲನವಲನ ಗಮನಿಸಲಾಗುತ್ತಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಜಿಲ್ಲೆಯಲ್ಲಿ ಒಟ್ಟು 1,943 ಜನರ ಮೇಲೆ ನಿಗಾ ಇರಿಸಲಾಗಿದೆ. 424 ಜನರು 28 ದಿನಗಳ ನಿಗಾ ಮುಗಿಸಿದ್ದಾರೆ ಎಂದರು.