ಮುದ್ದೇಬಿಹಾಳ(ವಿಜಯಪುರ):ತಾಲೂಕಿನ ಗಂಗೂರ ಕ್ರಾಸ್ ಬಳಿ ಕಾರು ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿ, ಮೂವರು ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಹುನಗುಂದ ಕಡೆಯಿಂದ ಮುದ್ದೇಬಿಹಾಳ ಮಾರ್ಗವಾಗಿ ದೇವರ ಹಿಪ್ಪರಗಿ ಕಡೆಗೆ ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ.
ಅಪಘಾತದಲ್ಲಿ ದೇವರ ಹಿಪ್ಪರಗಿಯ ಸಲೀಂ ಉರ್ಫ್ ಸಲ್ಮಾನ್ ಬಂದೇನವಾಜ್ ಟಕ್ಕಳಕಿ (20) ಹಾಗೂ ಸೈಪನ್ ತಾಂಬೋಳೆ(17) ಎಂಬುವರು ಸಾವನ್ನಪ್ಪಿದ್ದಾರೆ. ಇವರು ಹುನಗುಂದ ಕಡೆಯಿಂದ ಮುದ್ದೇಬಿಹಾಳ ಮಾರ್ಗವಾಗಿ ದೇವರ ಹಿಪ್ಪರಗಿ ಕಡೆಗೆ ಕಾರಿನಲ್ಲಿ ಹೊರಟಿದ್ದರು.