ಕರ್ನಾಟಕ

karnataka

ETV Bharat / state

ಎರಡು ಮನೆಗಳ ಕಳ್ಳತನ : ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಕಳ್ಳರು - ವಿಜಯಪುರ ಮನೆಗಳ ಕಳ್ಳತನ ಸುದ್ದಿ

ಬೀಗ ಹಾಕಿದ್ದ ಎರಡು ಮನೆಗಳ ಕಳ್ಳತನ ಮಾಡಿರುವ ಕಳ್ಳರು ಮನೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ, ನಗದು, ಮೊಬೈಲ್ ಕದ್ದು ಪರಾರಿಯಾಗಿದ್ದಾರೆ.

ಎರಡು ಮನೆಗಳ ಕಳ್ಳತನ
ಎರಡು ಮನೆಗಳ ಕಳ್ಳತನ

By

Published : Jun 16, 2020, 1:59 PM IST

ವಿಜಯಪುರ: ಬೀಗ ಹಾಕಿದ್ದ ಎರಡು ಮನೆಗಳ ಕಳ್ಳತನ ಮಾಡಿರುವ ಕಳ್ಳರು ಮನೆಯಲ್ಲಿದ್ದ ಅಪಾರ ಪ್ರಮಾಣದ ಚಿನ್ನಾಭರಣ, ನಗದು ದೋಚಿಕೊಂಡು ಹೋಗಿರುವ ಘಟನೆ ಇಂಡಿ ತಾಲೂಕಿನ ಪಡನೂರು ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಎರಡು ಮನೆಯಲ್ಲಿದ್ದ ನಗದು ಹಾಗೂ ಚಿನ್ನಾಭರಣ, ಎರಡು ಮೊಬೈಲ್ ಕದ್ದು ಪರಾರಿಯಾಗಿದ್ದಾರೆ. ಈ ವೇಳೆ ಮೂರನೇ ಮನೆ ಕಳ್ಳ ತನಕ್ಕೆ ಯತ್ನಿಸುತ್ತಿದ್ದಾಗ ಸ್ಥಳಿಯರ ಕಣ್ಣಿಗೆ ಬಿದ್ದಿದ್ದಾರೆ. ಕಳ್ಳರು ಸ್ಥಳೀಯರನ್ನ ನೋಡಿದ ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details