ಕರ್ನಾಟಕ

karnataka

ETV Bharat / state

ಕಾಲು ಜಾರಿ ಕಾಲುವೆಗೆ ಬಿದ್ದು ಇಬ್ಬರು ರೈತರ ಸಾವು - ಕಾಲುವೆಗೆ ಕಾಲು ಜಾರಿ ಬಿದ್ದು ಇಬ್ಬರು ರೈತರು ಸಾವು

ಕಾಲು ಜಾರಿ ಬಿದ್ದು ಇಬ್ಬರು ಮೃತಪಟ್ಟಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ದೀರ್ಘ ಸಮಯದ ಹುಡುಕಾಟದ ನಂತರ ಮೃತದೇಹ ದೊರಕಿದ್ದು, ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Two people died after slipping into canal
ಕಾಲುವೆಗೆ ಕಾಲು ಜಾರಿ ಬಿದ್ದು ಇಬ್ಬರು ಸಾವು

By

Published : Dec 6, 2022, 1:38 PM IST

ವಿಜಯಪುರ:ತಮ್ಮ ಜಮೀನಿಗೆ ನೀರು ಉಣಿಸಲು ಪಂಪಸೆಟ್ ಶುರು ಮಾಡಲು ಕಾಲುವೆಗೆ ಹೋದಾಗ ಕಾಲು ಜಾರಿ ಬಿದ್ದು ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಜಾಕವೆಲ್ ದೊಡ್ಡ ಕಾಲುವೆಯಲ್ಲಿ ಬೆಳಗ್ಗಿನ ಜಾವ ಈ ದುರ್ಘಟನೆ ನಡೆದಿದೆ.‌

ಶೇಖಪ್ಪ ಡೆಂಗಿ (40) ಹಾಗೂ ಅಶೋಕ ಅಂಗಡಿಗೇರಿ (45) ಮೃತಪಟ್ಟಿರುವ ದುರ್ದೈವಿಗಳು. ಸ್ಥಳಕ್ಕಾಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೀರ್ಘಸಮಯದ ಹುಡುಕಾಟದ ನಂತರ ಮೃತದೇಹ ದೊರಕಿದೆ. ಎರಡೂ ಮೃತದೇಹಗಳನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಶಾಲೆಯಿಂದ ಬಂದು ದನ ಕಾಯಲು ಹೋದ ಅಣ್ಣ ತಮ್ಮ.. ಕೃಷಿ ಹೊಂಡದಲ್ಲಿ ಮುಳುಗಿ ಸಾವು: ಪೋಷಕರ ಆಕ್ರಂದನ

ABOUT THE AUTHOR

...view details